Politics
ನೆಹರು ಅವರ ಪುಣ್ಯತಿಥಿಯಂದು ಮೋದಿ ಏನು ಹೇಳಿದರು?
ನವದೆಹಲಿ: ಭಾರತದ ಮೊದಲ ಪ್ರಧಾನ ಮಂತ್ರಿಗಳಾದ ಪಂಡಿತ್ ಜವಾಹರಲಾಲ್ ನೆಹರು ಅವರ ಪುಣ್ಯತಿಥಿಯಂದು, ದೇಶದ ಸಾವಿರಾರು ಗಣ್ಯರು ನೆಹರು ಅವರನ್ನು ನೆನೆದು ತಮ್ಮ ಗೌರವ ಸೂಚಿಸಿದ್ದಾರೆ.
ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಕೇವಲ ಒಂದೇ ಸಾಲಿನಲ್ಲಿ ನೆಹರು ಅವರ ಪುಣ್ಯತಿಥಿಯ ಕುರಿತು ಬರೆದುಕೊಂಡಿದ್ದಾರೆ. ಈ ಹಿಂದೆ ರಾಜೀವ್ ಗಾಂಧಿ ಅವರ ಪುಣ್ಯತಿಥಿಯಂದು ಕೂಡ ಮೋದಿಯವರು ಒಂದೇ ಸಾಲಿನಲ್ಲಿ ಗೌರವ ಸೂಚಿಸಿದ್ದರು.
ಕೇವಲ ಒಂದು ಸಾಲಿನಲ್ಲಿ ಗೌರವ ಸೂಚಿಸುವ ರೂಢಿ, ಎಲ್ಲಾ ಮಾಜಿ ಪ್ರಧಾನಿಗಳಿಗೂ ಅನ್ವಯಿಸುತ್ತದೆಯೋ ಅಥವಾ ಗಾಂಧಿ ಪರಿವಾರಕ್ಕೆ ಮಾತ್ರವೇ? ಎಂಬುದಕ್ಕೆ ಉತ್ತರ ಸಿಗಬೇಕಿದೆ.