ಶಿವಮೊಗ್ಗದಲ್ಲಿ ಮೋದಿ, ಡಿ.ಕೆ. ಸುರೇಶ್ ವಿರುದ್ಧ ವಾಗ್ದಾಳಿ.
2024ರ ಲೋಕಸಭಾ ಚುನಾವಣೆ ಇನ್ನೇನು ಸಮೀಪಿಸುತ್ತಿರುವ ಬೆನ್ನಲ್ಲಿಯೇ ಪ್ರಧಾನಿ ಮೋದಿ ಅವರ ಸಮಾವೇಶಗಳು ಅಧಿಕಗೊಳ್ಳುತ್ತಿವೆ. ಇಂದು ಶಿವಮೊಗ್ಗದಲ್ಲಿ ಸಮಾವೇಶ ನಡೆಸಿದ ನರೇಂದ್ರ ಮೋದಿಯವರು, ‘ಇಂಡಿ ಬ್ಲಾಕ್’ ವಿರುದ್ಧ ಹರಿತವಾದ ಮಾತುಗಳನ್ನು ಉಪಯೋಗಿಸಿದರು.
“ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗಿದರೂ ಸಹ ಕಾಂಗ್ರೆಸ್ ಪಕ್ಷ ಬ್ರಿಟಿಷರ ಮಾನಸಿಕತೆಯನ್ನು ಇನ್ನೂ ಬಿಟ್ಟಿಲ್ಲ. ಒಡೆದು ಆಳುವ ನೀತಿಯನ್ನು ಕಾಂಗ್ರೆಸ್ ಮೈಗೂಡಿಸಿಕೊಂಡಿದೆ. ಮೊದಲು ದೇಶವನ್ನು ಒಡೆದಿದ್ದಾಯಿತು, ಆನಂತರ ಜಾತಿ, ಧರ್ಮ, ಮತ, ಪಂಗಡ, ಹೀಗೆ ಇಷ್ಟು ವರ್ಷಗಳ ಕಾಲ ಒಡೆದು ಆಳಿದೆ ಕಾಂಗ್ರೆಸ್ ಪಕ್ಷ.” ಎಂದು ಹೇಳಿದರು.
ಈ ಮಧ್ಯೆ ಸಂಸದರಾದ ಡಿ.ಕೆ. ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿಯವರು, ದೇಶವನ್ನು ಇಷ್ಟು ಒಡೆದರು ಸಾಕಾಗದೆ, ಕಾಂಗ್ರೆಸ್ ಪಕ್ಷದ ಒಬ್ಬ ಸಂಸದ ದೇಶವನ್ನು ಮತ್ತೆ ವಿಭಜಿಸಲು ಕರೆ ನೀಡಿದ್ದಾರೆ, ಅಂತಹ ಸಂಸದನನ್ನು ಪಕ್ಷದಿಂದ ವಜಾಗೊಳಿಸುವ ಬದಲು ಕಾಂಗ್ರೆಸ್ ಪಕ್ಷ ಅವರನ್ನು ಕಾಪಾಡುತ್ತಿದೆ ಎಂದು ಪರೋಕ್ಷವಾಗಿ ಡಿ.ಕೆ. ಸುರೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು.