ಕನ್ಯಾಕುಮಾರಿಯಲ್ಲಿ ಧ್ಯಾನ, ಮೋದಿಯ ಮುಂದಿನ ನಡೆ ಏನು?
ಕನ್ಯಾಕುಮಾರಿ: ಹಿಂದೂ ಧರ್ಮ ಸುಧಾರಕ, ಭಾರತದ ಅಸ್ಮಿತೆಯನ್ನು ಜಗತ್ತಿಗೆ ಸಾರಿದ, ದೈವಾಂಶ ಸಂಭೂತ ಶ್ರೀ. ಸ್ವಾಮಿ ವಿವೇಕಾನಂದರು ಕುಳಿತು ಧ್ಯಾನ ಮಾಡಿ, ಭಾರತದ ಶ್ರೇಷ್ಠತೆಯ ಜ್ಞಾನ ಸಂಪಾದಿಸಿದ ಈ ಪವಿತ್ರ ಸ್ಥಳದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿಯವರು ಧ್ಯಾನಸ್ಥರಾಗಿ ಕುಳಿತಿದ್ದಾರೆ.
ಧ್ಯಾನ ಮಾಡಿ ಮೋಡಿ ಮಾಡಲಿದ್ದಾರಾ ಮೋದಿ?
ಇತ್ತ ಪ್ರಧಾನಿಯವರ ಈ ನಡೆಯನ್ನು ರಾಜಕೀಯ ದುರುದ್ದೇಶ ಎಂದು ವಿರೋಧ ಪಕ್ಷಗಳು ಟೀಕೆ ಮಾಡುತ್ತಿದ್ದಾರೆ. ಅವರ ಧ್ಯಾನ ಎಂಬುದು ಕೇವಲ ಮಾಧ್ಯಮಗಳ ಆಕರ್ಷಣೆಗಾಗಿ ಹೊರತು ನಿಜವಾದುದು ಅಲ್ಲ ಎಂದು ಹೇಳುತ್ತಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್, ಒಬ್ಬರ ಮೇಲೊಬ್ಬರು ಆರೋಪ ಮತ್ತು ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಕೇದಾರನಾಥದ ದೇವಾಲಯದ ಗುಹೆ ಒಂದರಲ್ಲಿ ಧ್ಯಾನಸ್ಥರಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಗಮನ ಸೆಳೆದಿದ್ದರು.
ಪ್ರಧಾನಿ ನರೇಂದ್ರ ಮೋದಿಯವರ ಈ ನಡೆ. ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರುವುದೇ?
ಇದಕ್ಕೆ ಉತ್ತರ ‘ಇಲ್ಲ’. ಈಗಾಗಲೇ ಭಾರತದ ಅತ್ಯಂತ ಹಲವು ಹಂತಗಳಲ್ಲಿ ಚುನಾವಣೆ ಪ್ರಕ್ರಿಯೆಯು ಈಗಾಗಲೇ ಮುಗಿದಿದ್ದು, ದೇಶದ ಪ್ರತಿಯೊಬ್ಬ ಪ್ರಜೆಯೂ ಜೂನ್ 04ರ ಫಲಿತಾಂಶಕ್ಕಾಗಿ ಕಾದು ಕುಳಿತಿದ್ದಾರೆ. ಹಾಗಾಗಿ ಮೋದಿಯವರ ಈ ನಡೆ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರದು.