ಮಾನ ಉಳಿಸಿದ ಮಾರುತಿ: ಅಪ್ರಾಪ್ತೆಯನ್ನು ಅತ್ಯಾಚಾರದಿಂದ ಕಾಪಾಡಿದ ಕೋತಿಗಳ ಗುಂಪು!
ಬಾಗ್ಪತ್: ಶನಿವಾರ ಉತ್ತರ ಪ್ರದೇಶದ ಬಾಗ್ಪತ್‌ನಲ್ಲಿ ನಡೆದ ಆಘಾತಕರ ಘಟನೆಯಲ್ಲಿ ಆರು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ ವ್ಯಕ್ತಿಯನ್ನು ಕೋತಿಗಳ ಗುಂಪೊಂದು ತಡೆಯಿತು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ವರದಿ ಪ್ರಕಾರ, ಆರೋಪಿ ಬಾಲಕಿಯನ್ನು ಹಳೆಯ ಪಾಳು ಬಿದ್ದ ಮನೆಗೆ ಕರೆದೊಯ್ಯಲು ಯತ್ನಿಸಿದಾಗ, ಕೋತಿಗಳು ಆತನ ಮೇಲೆ ಹಲ್ಲೆ ಮಾಡಿ ಆಕೆಯ ಪ್ರಾಣವನ್ನು ಉಳಿಸಿವೆ.
ತಂದೆಯ ಹೇಳಿಕೆ:
ಬಾಲಕಿಯ ತಂದೆಯ ಹೇಳಿಕೆಯಲ್ಲಿ, “ನನ್ನ ಮಗಳು ಮನೆಯಿಂದ ಹೊರಗಡೆ ಆಟವಾಡುತ್ತಿದ್ದಾಗ, ಆರೋಪಿಯು ಆಕೆಯನ್ನು ಪಾಳು ಬಿದ್ದ ಮನೆಗೆ ಕರೆದುಕೊಂಡು ಹೋಗಿ ದೌರ್ಜನ್ಯ ಎಸಗಲು ಯತ್ನಿಸಿದ. ಆದರೆ, ಅಲ್ಲಿ ಇರುವ ಕೋತಿಗಳು ಆತನ ಮೇಲೆ ದಾಳಿ ನಡೆಸಿ, ಆತನನ್ನು ಓಡಿಸಿದರು. ನಾನು ಈಗಲೂ ಆಗಿದ್ದನ್ನು ನೆನೆಸಿಕೊಳ್ಳುತ್ತಿದ್ದೇನೆ, ನನ್ನ ಮಗಳು ಈಗ ಬದುಕಿರುವುದು ಆ ಕೋತಿಗಳಿಂದ ಮಾತ್ರ.” ಎಂದು ಹೇಳಿದ್ದಾರೆ.
ಈ ಘಟನೆ ನಂತರ, ಬಾಲಕಿಯ ಪೋಷಕರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪೋಕ್ಸೋ ಕಾಯ್ದೆ ಹಾಗೂ ದೌರ್ಜನ್ಯಕ್ಕೆ ಸಂಬಂಧಿಸಿದ ಬಿಎನ್‌ಎಸ್ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಯು ಬಂಧನದಿಂದ ತಪ್ಪಿಸಿಕೊಳ್ಳದಂತೆ, ಪೊಲೀಸರು ಆತನ ಗುರುತನ್ನು ಕಂಡುಹಿಡಿಯಲು ಹರಸಾಹಸ ಪಡುತ್ತಿದ್ದಾರೆ.
ಪೋಕ್ಸೋ ಕಾಯ್ದೆ ವ್ಯಾಪ್ತಿ:
ಬಾಗ್ಪತ್ ಸರ್ಕಲ್ ಇನ್ಸ್ಪೆಕ್ಟರ್ ಹರೀಶ್ ಭೋದರಿಯಾ ಹೇಳಿರುವಂತೆ, “ಪೋಕ್ಸೋ ಕಾಯ್ದೆಯ ಅಡಿಯಲ್ಲಿ, ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಾವು ಆತನನ್ನು ಹಿಡಿಯಲು ಪರಿಶ್ರಮಿಸುತ್ತಿದ್ದೇವೆ.”
ಅಂತೂ ಈ ಬಾಲಕಿಗೆ ದೇವರು ಕೋತಿಯ ಸ್ವರೂಪದಲ್ಲಿ ಬಂದು ಪುನರ್ಜನ್ಮ ನೀಡಿದೆ.