Bengaluru
ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಮಾಸಿಕ ಪಿಂಚಣಿ.
ಬೆಂಗಳೂರು: ರಾಜ್ಯದಲ್ಲಿ ಕಾರ್ಮಿಕ ವರ್ಗ ಅತ್ಯಂತ ಕಷ್ಟದಲ್ಲಿ ಜೀವನ ನಡೆಸುವಂತಹ ಸಮಾಜದ ಭಾಗವಾಗಿದೆ. ಕೆಲಸದಲ್ಲಿಯೇ ಜೀವನ ಸವೆಸುವ ಕಾರ್ಮಿಕ ವರ್ಗದ ಜನರು ತಮ್ಮ ಇಳಿವಯಸ್ಸಿನಲ್ಲಿ ಕಷ್ಟ ಅನುಭವಿಸಬಾರದು ಎಂದು, ರಾಜ್ಯ ಸರ್ಕಾರ ಇಂತಹ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ ತಂದಿದೆ.
60 ವರ್ಷ ದಾಟಿರುವ ಕಾರ್ಮಿಕರು ನೀವಾಗಿದ್ದರೆ, ರಾಜ್ಯ ಸರ್ಕಾರ ನಿಮ್ಮನ್ನು ಫಲಾನುಭವಿ ಎಂದು ಗುರುತಿಸಿ, ಮಾಸಿಕ ಪಿಂಚಣಿ ನೀಡಲಿದೆ. ಇದಕ್ಕಾಗಿ ನೀವು ಸರ್ಕಾರದ ಕಾರ್ಮಿಕ ಇಲಾಖೆಗೆ ಸಂಬಂಧಪಟ್ಟಂತಹ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು ಇಂತಿವೆ:
- ಮಂಡಳಿಯಿಂದ ನೀಡಿರುವ ಗುರುತಿನ ಚೀಟಿ.
- ಫಲಾನುಭವಿಯ ಬ್ಯಾಂಕ್ ಪಾಸ್ ಬುಕ್ ಪ್ರತಿ.
- ಜೀವಿತ ಪ್ರಮಾಣ ಪತ್ರ.
- ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಪ್ರತಿ.
- ಉದ್ಯೋಗ ದೃಢೀಕರಣ ಪತ್ರ ಮತ್ತು ಸ್ವಯಂ ದೃಢೀಕರಣ ಪತ್ರ.
ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಲು ಕಾರ್ಮಿಕ ಸಹಾಯವಾಣಿ ಸಂಖ್ಯೆ 155214 ಕ್ಕೆ ಕರೆಮಾಡಬಹುದು.