Politics
10,000ಕ್ಕೂ ಹೆಚ್ಚು ಉಕ್ರೇನ್ ಸೈನಿಕರ ಮಾರಣಹೋಮ.

ಮಾಸ್ಕೋ: ನ್ಯಾಟೋ ದೇಶಗಳ ಸೈನ್ಯವು ಉಕ್ರೇನ್ ದೇಶದ ಪರವಾಗಿ ರಷ್ಯಾ ವಿರುದ್ಧ ಹೋರಾಡಲಿದೆ, ಎಂಬ ನ್ಯಾಟೋ ಸಮೂಹದ ಹೇಳಿಕೆ ಬಂದ ತಕ್ಷಣ ರಷ್ಯಾ ಇದರ ವಿರುದ್ಧವಾಗಿ ತನ್ನ ಎಲ್ಲಾ ಶಕ್ತಿಯನ್ನು ಉಪಯೋಗಿಸಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ರಷ್ಯಾ ತನ್ನ ಗಡಿಯಿಂದ ಉಕ್ರೇನ್ ಮೇಲೆ ಮಿಸೈಲ್‌ಗಳ ಮಳೆಯನ್ನೇ ಸುರಿಸಿದೆ. ಇದರಿಂದ ಬರೋಬ್ಬರಿ 10,000 ಉಕ್ರೇನ್ ಸೈನಿಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ಮಾಹಿತಿ ಎಷ್ಟು ಸತ್ಯ ಎಂಬುದನ್ನು ತಿಳಿಯಲು ಇನ್ನಷ್ಟು ತನಿಖೆ ಮಾಡಬೇಕಾಗಿದೆ.
ಇತ್ತ ಮುಂದೆ ಸಂಭವಿಸಲಿರುವ ಪರಿಣಾಮಗಳು ದೃಷ್ಟಿಕೋನದಿಂದ ಅಮೇರಿಕಾ ಅಧ್ಯಕ್ಷ ಬಿಡೆನ್ ಅವರು, ಫ್ರೆಂಚ್ ರಾಷ್ಟ್ರಾಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರಾನ್ ಅವರಿಗೆ ಫ್ರೆಂಚ್ ಸೈನ್ಯವನ್ನು ಉಕ್ರೇನ್ ನಲ್ಲಿ ಇಳಿಸಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.