“ಬಿಜೆಪಿ ಸರ್ಕಾರದ ಅವಧಿಯಲ್ಲಿ ₹300 ಕೋಟಿಗೂ ಹೆಚ್ಚಿನ ಹಗರಣಗಳಾಗಿವೆ.”- ಡಿಕೆ ಶಿವಕುಮಾರ್.
ಬೆಂಗಳೂರು: ರಾಜ್ಯದಲ್ಲಿ ಆರೋಪ ಮತ್ತು ಪ್ರತ್ಯಾರೋಪಗಳು ವಿಧಾನಸಭೆಯ ಕಲಾಪ ಪ್ರಾರಂಭವಾದ ದಿನದಿಂದ ಬಾರಿ ಜೋರಾಗಿ ಕೇಳಿ ಬರುತ್ತಿದೆ. ಮುಡಾ ಹಗರಣ, ವಾಲ್ಮೀಕಿ ಹಗರಣ ಹೀಗೆ ಕಾಂಗ್ರೆಸ್
ಹಗರಣಗಳ ವಿರುದ್ಧ ಬಿಜೆಪಿ ವಿಧಾನಸಭೆಯಲ್ಲಿ ಹಾಗೂ ರಾಜ್ಯದ ಇತರೆಡೆ ಪ್ರತಿಭಟನೆ ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ₹300 ಕೋಟಿಗೂ ಹೆಚ್ಚು ಹಗರಣಗಳನ್ನು ಮಾಡಿದೆ ಎಂದು ಆರೋಪಿಸಿದರು.
“…ಕರ್ನಾಟಕದಲ್ಲಿ ಬಿಜೆಪಿ ಸರಕಾರವಿದ್ದಾಗ ಹಲವಾರು ಹಗರಣಗಳು ನಡೆದಿವೆ… ಇದನ್ನು ವಿಧಾನಸಭೆಯ ಮುಂದೆ ಹೇಳುತ್ತೇವೆ ಮತ್ತು ದಾಖಲೆಗೆ ತರುತ್ತೇವೆ. ಬಿಜೆಪಿ ಸರಕಾರದಲ್ಲಿ 300 ಕೋಟಿ ರೂ.ಗೂ ಹೆಚ್ಚು ಹಗರಣಗಳು ನಡೆದಿವೆ. ನಾವು ಹೇಳುತ್ತೇವೆ. ಅವರು ಭ್ರಷ್ಟಾಚಾರದ ರಾಜರು ಎಂದು ಸದನದಲ್ಲಿ ಹೇಳಲಾಗಿದೆ … ಕೆಲವು ವಿಚಾರಣೆಗಳು ನಡೆಯುತ್ತಿವೆ ಮತ್ತು ಶೀಘ್ರದಲ್ಲೇ ನಾವು ಅಪರಾಧಿಗಳನ್ನು ಬಂಧಿಸುತ್ತೇವೆ … ” ಎಂದು ಮಾಧ್ಯಮಗಳಿಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಒಟ್ಟಿನಲ್ಲಿ ರಾಜ್ಯ ರಾಜಕಾರಣ ಕೆಸರಾಟರ ಮೈದಾನದಂತೆ ಆಗಿದೆ. ಒಬ್ಬರ ಮೇಲೆ ಒಬ್ಬರು ಹಗರಣದ ಪಟ್ಟಿ ಎರಚುವುದು ಮುಂದುವರೆದಿದೆ. ಈ ಹಗರಣಗಳ ಕಿರುಚಾಟಗಳಿಂದ ಕಳೆದ ಎರಡು ದಿನಗಳಿಂದ ಕಲಾಪ ಯಾವುದೇ ಸಕಾರಾತ್ಮಕ ಬೆಳವಣಿಗೆ ಕಂಡಿಲ್ಲ.