Politics
ಕಣ್ಣೀರು ಹಾಕುತ್ತಾ ಹೊರಟ ಹೆಬ್ಬಾಳ್ಕರ್ ಮಗ.
ಬೆಳಗಾವಿ: 2024ರ ಲೋಕಸಭಾ ಚುನಾವಣೆ ಫಲಿತಾಂಶ ಹಿಂದೂ ಹೊರಬರಲಿದ್ದು, ಈಗಾಗಲೇ ಅರ್ಧ ಪಲಿತಾಂಶ ದೇಶದ ಜನರ ಕಣ್ಣು ಮುಂದೆ ಇಡಲಾಗಿದೆ. ಅದೇ ರೀತಿಯಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದ ಫಲಿತಾಂಶ ಕೂಡ ಹೊರಬರುತ್ತಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷ ಹೋಗಿ, ಪುನಃ ಬಿಜೆಪಿಗೆ ಬಂದಿರುವ ಜಗದೀಶ್ ಶೆಟ್ಟರ್ ಅವರು ಬರೋಬರಿ ಒಂದು ಲಕ್ಷ ಮತಗಳ ಅಂತರವನ್ನು ಕಾಯ್ದುಕೊಂಡಿದ್ದಾರೆ.
ಇದೇ ವೇಳೆ ಅವರ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಆದಂತಹ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪುತ್ರ ಮೃನಾಲ್ ಹೆಬ್ಬಾಳ್ಕರ್ ಅವರು ಸೋಲುವ ಭೀತಿಯಲ್ಲಿ ಕಂಡು ಬಂದಿದ್ದಾರೆ. ಇದೇ ವೇಳೆ ಕಣ್ಣೀರು ಸುರಿಸುತ್ತಾ ಮತ ಎಣಿಕೆಯ ಕೇಂದ್ರದಿಂದ ಹೊರಬರುವ ದೃಶ್ಯವು ಕಂಡು ಬಂದಿದೆ.