
ಮುಂಬೈ: ಮುಂಬೈ ಸಮುದ್ರ ತೀರದಲ್ಲಿ ಬುಧವಾರ ಸಂಜೆ ಸಂಭವಿಸಿದ ದುರಂತ ಹಲವರ ಪ್ರಾಣ ಕಿತ್ತುಕೊಂಡಿದೆ. ಮುಂಬೈ-ಎಲೆಫಂಟಾ ದ್ವೀಪದ ನಡುವೆ ಪ್ರವಾಸಿಗರನ್ನು ಸಾಗಿಸುತ್ತಿದ್ದ ಫೆರ್ರಿ ಒಂದು, ಭಾರತೀಯ ನೌಕಾಪಡೆಯ ಹಡಗಿಗೆ ಡಿಕ್ಕಿಯಾಗಿದೆ. ಈ ದುರಂತದಲ್ಲಿ 13 ಮಂದಿ ಮೃತಪಟ್ಟಿದ್ದು, 2 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಘಟನೆ ವಿವರ:
ಡಿಸೆಂಬರ್ 18ರ ಸಂಜೆ 4 ಗಂಟೆಗೆ ಮುಂಬೈ ಸಮುದ್ರದ ಬುಚರ್ ದ್ವೀಪದ ಹತ್ತಿರ ಈ ದುರಂತ ನಡೆದಿದೆ. ಫೆರ್ರಿಯಲ್ಲಿದ್ದ 110 ಪ್ರಯಾಣಿಕರ ಪೈಕಿ 20 ಮಕ್ಕಳು ಸೇರಿದ್ದರು ಎಂದು ಭಾರತೀಯ ನೌಕಾಪಡೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೃತರ ಪೈಕಿ 10 ಮಂದಿ ನಾಗರಿಕರು, 3 ಮಂದಿ ನೌಕಾಪಡೆಯ ಸಿಬ್ಬಂದಿ ಇದ್ದಾರೆ.