Politics
“ನನ್ನ ತಂದೆ ಕರುಣಾನಿಧಿ ಅಲ್ಲ” – ಅಣ್ಣಾಮಲೈ.
ಚೆನ್ನೈ: 2024ರ ಲೋಕಸಭಾ ಚುನಾವಣೆಯಲ್ಲಿ ಕೊಯಂಬತ್ತೂರು ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ, ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಶ್ರೀ. ಕೆ. ಅಣ್ಣಾಮಲೈ ಅವರು, ಡಿಎಂಕೆ ಸ್ಪರ್ಧಿ ಗಣಪತಿ ಪಿ. ರಾಜಕುಮಾರ್ ಅವರ ವಿರುದ್ಧ 1.14 ಲಕ್ಷ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.
ಫಲಿತಾಂಶದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅಣ್ಣಾಮಲೈ ಅವರು, “ನನ್ನ ತಂದೆ ಕರುಣಾನಿಧಿ ಅಲ್ಲ, ನನ್ನ ತಂದೆಯ ಹೆಸರು ಕುಪ್ಪುಸ್ವಾಮಿ, ನನ್ನ ತಂದೆಯೂ ಕರುಣಾನಿಧಿ ಅಗಿದ್ದರೆ ನಾನು ಸಹ ಶಾರ್ಟ್ ಕಟ್‌ನಲ್ಲಿ ಎಂಪಿ ಆಗುತ್ತಿದ್ದೆ. ಆದರೆ ನನ್ನ ತಂದೆ ಕುಪ್ಪುಸ್ವಾಮಿ, ನಿಧಾನವಾಗಿಯಾದರೂ ಪರವಾಗಿಲ್ಲ ಸತ್ಯದ ದಾರಿಯಲ್ಲಿ ನಡೆ ಎಂದು ಹೇಳಿಕೊಟ್ಟಿದ್ದಾರೆ.” ಎಂದರು.
ಭಾರತೀಯ ಜನತಾ ಪಕ್ಷವು ತಮಿಳುನಾಡಿನಲ್ಲಿ ಈ ಬಾರಿ ಯಾವುದೇ ಸ್ಥಾನವನ್ನೂ ಗೆದ್ದಿಲ್ಲ. ತಮಿಳು ಪ್ರಾದೇಶಿಕ ಪಕ್ಷಗಳ ಹಿಡಿತದಿಂದ ತಮಿಳು ಜನರನ್ನು ಆಕರ್ಷಿಸಲು ಬಿಜೆಪಿಗೆ ಇನ್ನೂ ಅಧಿಕ ಸರ್ಕಸ್ ಮಾಡಬೇಕಾಗುತ್ತದೆ.