Politics
‘ಮೈಸೂರು ಚಲೋ’: ನಾಳೆ ಬಿಜೆಪಿ ಹಾಗೂ ಜೆಡಿಎಸ್ ಬ್ರಹತ್ ಪಾದಯಾತ್ರೆ.
ಮೈಸೂರು: ರಾಜ್ಯದ ವಿರೋಧ ಪಕ್ಷಗಳಾದಂತಹ ಭಾರತೀಯ ಜನತಾ ಪಕ್ಷ ಮತ್ತು ಜಾತ್ಯಾತೀತ ಜನತಾದಳ ಪಕ್ಷಗಳು ಒಗ್ಗೂಡಿ, ನಾಳೆಯ ದಿನಾಂಕ 03.08.2024, ಶನಿವಾರ ಬೆಳಿಗ್ಗೆ ಎಂಟು ಗಂಟೆಗೆ, ಬೆಂಗಳೂರಿನಿಂದ ಮೈಸೂರಿನವರೆಗೆ ‘ಮೈಸೂರು ಚಲೋ’ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಂಡಿವೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಕಾಂಗ್ರೆಸ್ ಪಕ್ಷದ ಹಗರಣಗಳ ಬಗ್ಗೆ ಜನಜಾಗ್ರತಿ ಮೂಡಿಸುವ ಸಲುವಾಗಿ ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷಗಳ ವಕ್ತಾರರು ತಿಳಿಸಿದ್ದಾರೆ. ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ, ಹೀಗೆ ಕಾಂಗ್ರೆಸ್ ಸರ್ಕಾರದ ಸಾಲು ಸಾಲು ಹಗರಣಗಳು ಈಗ ವಿರೋಧ ಪಕ್ಷಗಳ ದಾಳವಾಗಿ ಪರಿವರ್ತನೆಯಾಗಿದೆ.
ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಒಂದಾಗಿ ನಡೆಸಲಿರುವ ಈ ಪಾದಯಾತ್ರೆ ಎಷ್ಟು ಪ್ರಮಾಣದಲ್ಲಿ ಸಫಲವಾಗಲಿದೆ ಎಂದು ಕಾದು ನೋಡಬೇಕಾಗಿದೆ. ಈ ಹಿಂದೆ ಭಾರತೀಯ ಜನತಾ ಪಕ್ಷ ಏಕಾಂಗಿಯಾಗಿ ನಡೆಸಿದ ಪ್ರತಿಭಟನೆಗಳು ಯಾವುದೇ ಪರಿಣಾಮಗಳನ್ನು ನೀಡಲಿಲ್ಲ. ಈಗ ಜಂಟಿಯಾಗಿ ನಡೆಸುವ ಈ ಪಾದಯಾತ್ರೆ ಫಲ ನೀಡಲಿದೆಯೇ?