CinemaEntertainment

ನಾಯಿ ಇದೆ ಎಚ್ಚರಿಕೆ!: ಸ್ಯಾಂಡಲ್‌ವುಡ್‌ನಲ್ಲಿ ಹೀರೋ ಆಗಲು ರೆಡಿಯಾದ ವೈದ್ಯ ಡಾ. ಲೀಲಾ ಮೋಹನ್ ಕನಸಿನ ಚಿತ್ರ..!

ಬೆಂಗಳೂರು: ಸಿನಿಮಾ ಕ್ಷೇತ್ರದತ್ತ ಹೆಜ್ಜೆ ಇಟ್ಟ ಖ್ಯಾತ ವೈದ್ಯ ಡಾ. ಲೀಲಾ ಮೋಹನ್ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಹಾದಿಯನ್ನೇ ಆಯ್ದುಕೊಂಡಿದ್ದಾರೆ. 18 ವರ್ಷಗಳ ಕಾಲ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಜನಪ್ರಿಯ ವೈದ್ಯರಾಗಿ ಮೆರೆದ ಲೀಲಾ ಮೋಹನ್ ಇದೀಗ ತಮ್ಮ ಕಲಾ ಕನಸನ್ನು ಪೂರೈಸಲು ಚಿತ್ರರಂಗದಲ್ಲಿ ಹೀರೋ ಆಗಲು ಸಜ್ಜಾಗಿದ್ದಾರೆ. ವೈದ್ಯಕೀಯ ಸೇವೆಯಲ್ಲಿ ಯಶಸ್ವಿಯಾಗಿ ಗುರುತಿಸಿಕೊಂಡಿರುವ ಡಾ. ಲೀಲಾ ಮೋಹನ್ ಅವರ ಚಿತ್ರರಂಗದ ಪ್ರಯಾಣ ಪ್ರೇರಣಾದಾಯಕವಾಗಿದೆ.

‘ಬದುಕು’ ಧಾರಾವಾಹಿ ಮೂಲಕ ಕಿರುತೆರೆಗೆ ಪರಿಚಯವಾದ ಲೀಲಾ ಮೋಹನ್, ನಂತರ ತಮ್ಮದೇಯಾದ ಕಿರುಚಿತ್ರಗಳನ್ನು ಯೂಟ್ಯೂಬ್ ಮೂಲಕ ಬಿಡುಗಡೆ ಮಾಡಿ ಅಭಿಮಾನಿಗಳನ್ನು ಸಂಪಾದಿಸಿದರು. ಕನ್ನಡದ ‘ಕ್ರೌರ್ಯ’ ಸಿನಿಮಾದಿಂದ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ಅವರು ಇದೀಗ ‘ಗಡಿಯಾರ’, ‘ಪುಟಾಣಿ ಪಂಟ್ರು’, ‘ರ್ಯಾವನ್’, ‘ಉಗ್ರಾವತಾರ’ ಮುಂತಾದ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ಮಾಡಿದ್ದರು. ಇದರಲ್ಲಿ ‘ಉಗ್ರಾವತಾರ’ ಚಿತ್ರದ ಸೈಕೋ ಸುದರ್ಶನ ಪಾತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದಾರೆ.

ಡಾಕ್ಟರ್ ಮಾತ್ರವಲ್ಲ, ನಿರ್ಮಾಪಕ, ವಿತರಕರಾಗಿ, ಹಲವು ಪಾತ್ರಗಳಲ್ಲಿ ತೊಡಗಿಸಿಕೊಂಡಿರುವ ಲೀಲಾ ಮೋಹನ್, ಪ್ರಿಯಾಮಣಿ ನಟನೆಯ ‘ಅಂಗುಲಿಕಾ’ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಣೆ ಮಾಡುವ ಮೂಲಕ ವಿತರಕರ ಪಟ್ಟಿಗೂ ಸೇರ್ಪಡೆಯಾದರು. ಸಿನಿಮಾ ಪ್ರಪಂಚದ ಬಹುತೇಕ ಕ್ಷೇತ್ರಗಳಲ್ಲಿ ತಮ್ಮ ಮೆರುಗು ತೋರಿಸಿರುವ ಅವರು, ಈಗ ದೊಡ್ಡ ಹೀರೋ ಆಗಬೇಕೆಂಬ ಮಹಾತ್ಮ ಕನಸನ್ನು ಹೊತ್ತಿದ್ದಾರೆ.

Show More

Leave a Reply

Your email address will not be published. Required fields are marked *

Related Articles

Back to top button