BengaluruCinemaEntertainment
ನಾಡಪ್ರಭು ಕೆಂಪೇಗೌಡ ಚಿತ್ರದ ಮೊದಲ ಲುಕ್.
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಮೊಟ್ಟಮೊದಲ ಬಾರಿಗೆ ನೂತನ ತಂತ್ರಜ್ಞಾನವನ್ನು ಬಳಸಿ, ಬೆಂಗಳೂರು ನಿರ್ಮಾತೃ ಕೆಂಪೇಗೌಡ ಅವರ ಜೀವನ ಆಧಾರಿತ ಚಲನಚಿತ್ರವನ್ನು ತೆರೆಯ ಮೇಲೆ ತರಲು ಮುಂದಾಗಿದ್ದಾರೆ, ನಿರ್ದೇಶಕರಾದ ಡಾ|| ಟಿ.ಎಸ್. ನಾಗಾಭರಣ. ಈ ಚಿತ್ರದ ಮೊದಲ ಲುಕ್ ಈಗ ಅನಾವರಣಗೊಂಡಿದೆ.
ಡಾಲಿ ಧನಂಜಯ್ ಅವರು ಕೆಂಪೇಗೌಡರ ಪಾತ್ರ ನಿರ್ವಹಿಸಲಿದ್ದಾರೆ. ಮೊದಲ ಲುಕ್ ನಲ್ಲಿ ಧನಂಜಯ್ ಅವರು ಕೆಂಪೇಗೌಡರ ತದ್ರೂಪ ಎಂಬಂತೆ ಕಾಣುತ್ತಿದ್ದಾರೆ. ಆ ಮೀಸೆ, ತಿಲಕ, ಪೇಟ, ಗುರ್ರಾಣಿ ಹಿಡಿದ ಬಂಗಿ ಎಲ್ಲವೂ ಚಿತ್ರ ರಸಿಕರಲ್ಲಿ ಈ ಚಿತ್ರದ ಕುರಿತ ಕುತೂಹಲವನ್ನು ಹೆಚ್ಚಿಸಿದೆ. ಈ ಚಿತ್ರಕ್ಕೆ ಡಾ|| ಎಂ.ಎಸ್. ಶಿವರುದ್ರಪ್ಪ ಹಾಗೂ ಶುಭಂ ಗುಂಡಾಲ್ ಅವರು ನಿರ್ಮಾಪಕರಾಗಿದ್ದಾರೆ.