BengaluruKarnataka

“ನಮ್ಮ ಬೆಂಗಳೂರು ಚಾಲೆಂಜ್”: ಒಂದು ಸೂಕ್ತ ಐಡಿಯಾ ನಿಮಗೆ ತಂದುಕೊಡಲಿದೆ 10 ಲಕ್ಷ ರೂಪಾಯಿ..!

ಬೆಂಗಳೂರು: ಬೆಂಗಳೂರು ತನ್ನ ದಿನನಿತ್ಯ ಕಾಡುತ್ತಿರುವ ಸಮಸ್ಯೆಗಳಿಗೆ ಹೊಸ ಪರಿಹಾರಗಳನ್ನು ಹುಡುಕುವ ಅವಶ್ಯಕತೆ ಹೆಚ್ಚಿದೆ. ಇದನ್ನು ಮನಗಂಡು, ಲಾಭರಹಿತ ಸಂಸ್ಥೆ ಅನ್‌ಬಾಕ್ಸಿಂಗ್‌ ಬೆಂಗಳೂರು ಹಾಗೂ ಹೂಡಿಕೆದಾರ ನಿಖಿಲ್ ಕಾಮತ್‌ ಅವರ ಡಬ್ಲ್ಯೂಟಿ ಫಂಡ್‌ ಸಹಭಾಗಿತ್ವದಲ್ಲಿ ‘ನಮ್ಮ ಬೆಂಗಳೂರು ಚಾಲೆಂಜ್’ ಎಂಬ ಹೊಸ ಉಪಕ್ರಮವನ್ನು ಘೋಷಿಸಲಾಗಿದೆ.

ಪ್ರತಿಯೊಬ್ಬರಿಗೂ ಅವಕಾಶ: ಬೆಂಗಳೂರು ಸಂಚಾರ ದಟ್ಟಣೆಯ ಸಮಸ್ಯೆಯಿಂದ ಹಿಡಿದು ಪರಿಸರ, ನಿರ್ವಹಣೆ, ತಂತ್ರಜ್ಞಾನ ಮುಂತಾದ ಹಲವು ಕ್ಷೇತ್ರಗಳಲ್ಲಿ ವೈಶಿಷ್ಟ್ಯಪೂರ್ಣ ಪರಿಹಾರ ಆಲೋಚನೆಗಳನ್ನು ಹೊಂದಿರುವವರೆಲ್ಲರಿಗೂ ಇದು ಒಮ್ಮೆ ಪ್ರಯತ್ನಿಸಬಹುದಾದ ಅವಕಾಶವಾಗಿದೆ. ಈ ಚಾಲೆಂಜ್‌ನಲ್ಲಿ 5 ಜನರ ಉತ್ತಮ ಆಯ್ಕೆಗೆ ತಲಾ ₹10 ಲಕ್ಷಗಳ ಅನುದಾನ ನೀಡಲಾಗುತ್ತದೆ.

ಹೆಚ್ಚಿನ ವಿವರಗಳು: ನವೆಂಬರ್ 1, 2024 ರಿಂದ ಅರ್ಜಿಗಳು ತೆರೆದಿದ್ದು, ಅನ್‌ಬಾಕ್ಸಿಂಗ್‌ ಬೆಂಗಳೂರಿನ ವೆಬ್‌ಸೈಟ್‌ನಲ್ಲಿ ನಿಮ್ಮ ಐಡಿಯಾಗಳನ್ನು ನೋಂದಾಯಿಸಲು ಅವಕಾಶವಿದೆ. ಯೋಜನೆಯ ಪ್ಲಾನ್, ಪ್ರಭಾವ, ಕಾರ್ಯಸಾಧ್ಯತೆ, ಮತ್ತು ಬದ್ಧತೆ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಟಾಪ್ 5 ಗೆದ್ದವರಿಗೆ ಬೆಂಗಳೂರು ಹಬ್ಬದ ಫ್ಯೂಚರ್ಸ್ ಕಾನ್ಫರೆನ್ಸ್‌ನಲ್ಲಿ, ಜನಸಮೂಹದ ಮುಂದೆ ತಮ್ಮ ಯೋಜನೆಗಳನ್ನು ಪ್ರಸ್ತುತಪಡಿಸುವ ಅವಕಾಶ ಲಭ್ಯವಿರುತ್ತದೆ.

ಅನ್‌ಬಾಕ್ಸಿಂಗ್‌ ಬೆಂಗಳೂರು ಮತ್ತು ಡಬ್ಲ್ಯೂಟಿ ಫಂಡ್‌ನ ಮಾತು: ಅನ್‌ಬಾಕ್ಸಿಂಗ್‌ ಬೆಂಗಳೂರಿನ ಸಿಇಒ ಮಾಲಿನಿ ಗೋಯಲ್ ಅವರು, “ನಮ್ಮ ಬೆಂಗಳೂರು ಚಾಲೆಂಜ್ ಮುಂದಿನ ಪೀಳಿಗೆಗೆ ನಮ್ಮ ಸಮುದಾಯಗಳಿಗೆ ಪ್ರಯೋಜನವಾಗುವ ನವೀನ ಪರಿಹಾರಗಳನ್ನು ಪೋಷಿಸುವುದು ನಮ್ಮ ಉದ್ದೇಶ, ಈ ಚಾಲೆಂಜ್ ಪ್ರತಿಯೊಬ್ಬರಿಗೂ ತೆರೆದಿದೆ” ಎಂದರೆ, ಡಬ್ಲ್ಯೂಟಿ ಫಂಡ್‌ನ ನಿಖಿಲ್ ಕಾಮತ್ ಅವರು “ಈ ಸವಾಲು ಚಿಂತಕರು, ಕೆಲಸ ಮಾಡುವವರು, ಮತ್ತು ನಗರವನ್ನು ಉತ್ತಮವಾಗಿ ರೂಪಿಸಬಹುದು ಎಂದು ನಂಬುವ ಪ್ರತಿಯೊಬ್ಬರಿಗೂ ಆಗಿದೆ.” ಎಂದು ಈ ಕಾರ್ಯಕ್ರಮದ ಕುರಿತ ಕುತೂಹಲವನ್ನು ಹೆಚ್ಚಿಸಿದರು.

ಅನ್‌ಬಾಕ್ಸಿಂಗ್‌ ಬೆಂಗಳೂರು ಕುರಿತ ಮಾಹಿತಿ:
ಲಾಭರಹಿತ ವೇದಿಕೆ ಆಗಿರುವ ಅನ್‌ಬಾಕ್ಸಿಂಗ್‌ ಬೆಂಗಳೂರು, ನಗರದ ಪಯಣವನ್ನು ಮತ್ತು ಅದರ ಸಮಕಾಲೀನ ಇತಿಹಾಸವನ್ನು ದಾಖಲಿಸುವ ಮತ್ತು ಹರಡುವ ಪ್ರಯತ್ನದಲ್ಲಿದೆ. ಬೆಂಗಳೂರು ವಾರ್ಷಿಕ ನಗರ ಉತ್ಸವ ಹಬ್ಬ, ನಿಮ್ಮ ಉದ್ಯಾನವನದಲ್ಲಿ ಹಬ್ಬ, ಪುಸ್ತಕ ಪ್ರಕಟಣೆ, ಮತ್ತು ಪಾಡ್‌ಕ್ಯಾಸ್ಟ್‌ಗಳ ಮೂಲಕ ನಗರದ ಇತಿಹಾಸವನ್ನು ಜೀವನಂತವಾಗಿ ನಮ್ಮ ಮುಂದಿಟ್ಟಿದೆ.

ಡಬ್ಲ್ಯೂಟಿ ಫಂಡ್ ಬಗ್ಗೆ ಸಂಕ್ಷಿಪ್ತ ಮಾಹಿತಿ:
ಡಬ್ಲ್ಯೂಟಿ ಫಂಡ್ ನಿಖಿಲ್ ಕಾಮತ್ ಅವರ ಸಹಭಾಗಿತ್ವದಲ್ಲಿ ಸ್ಥಾಪಿತವಾಗಿದ್ದು, ಪ್ರಾರಂಭ ಹಂತದ ಸ್ಟಾರ್ಟ್‌ಅಪ್‌ಗಳಿಗೆ ಆರ್ಥಿಕ ನೆರವನ್ನು ಒದಗಿಸುತ್ತದೆ. ಭಾರತದ ವಿವಿಧ ಕ್ಷೇತ್ರಗಳಲ್ಲಿ ಯುವ ಉದ್ಯಮಿಗಳ ಬೆಳವಣಿಗೆಯನ್ನು ಬಲಪಡೆಸುವ ಪ್ರಮುಖ ಪ್ರಯತ್ನವಾಗಿದೆ.

ಈಗಲೇ ನಿಮ್ಮ ಐಡಿಯಾವನ್ನು ಅಪ್ಲೋಡ್ ಮಾಡಿ: ನಿಮ್ಮ ಐಡಿಯಾ ಬೆಂಗಳೂರಿನ ಸಮಸ್ಯೆಗಳಿಗಾಗಿ ಸೂಕ್ತವಾಗಿದ್ದರೆ, ಇಲ್ಲಿ ನಿಮ್ಮ ಅನುದಾನ ಗೆಲ್ಲುವ ಅವಕಾಶವಿದೆ.

Show More

Leave a Reply

Your email address will not be published. Required fields are marked *

Related Articles

Back to top button