ಮತ್ತೆ ಅವತರಿಸಲಿದ್ದಾನೆ “ನರಸಿಂಹ”: ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಲಿದೆ 3D ಹಿಂದೂ ಪುರಾಣ!
ಬೆಂಗಳೂರು: ಪ್ರಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ತನ್ನ ಮುಂದಿನ ಮಹತ್ವಾಕಾಂಕ್ಷಿ ಯೋಜನೆಯ ಮೊದಲ ಝಲಕ್ ಬಿಡುಗಡೆ ಮಾಡಿದ್ದು, ಇದು ಭಾರತದಲ್ಲಿಯೇ ಮೊದಲ 3D ಅನಿಮೇಷನ್ ಚಲನಚಿತ್ರದ ಮಹಾವತಾರ ಸರಣಿಯ ಮೊದಲ ಭಾಗ ‘ಮಹಾವತಾರ ನರಸಿಂಹ’. ಕ್ಲೀಮ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಈ ಮಹಾಕಾವ್ಯವನ್ನು ಹೊಂಬಾಳೆ ಫಿಲ್ಮ್ಸ್ ಪ್ರಸ್ತುತಪಡಿಸುತ್ತಿದೆ.
ಅನಿಮೇಷನ್ ಟೀಸರ್: ಅಧರ್ಮದ ಅಂಧಕಾರದ ವಿರುದ್ಧ ಸ್ವಾಮಿ ನರಸಿಂಹನ ಉದಯ.
ಇಂದು ನವೆಂಬರ್ 16 ರಂದು ಬಿಡುಗಡೆಯಾದ ಅನಿಮೇಷನ್ ಮೋಷನ್ ಪೋಸ್ಟರ್ನಲ್ಲಿ, “ಅಂಧಕಾರ ಮತ್ತು ಅಶಾಂತಿಯ ಮಧ್ಯೆ, ನಂಬಿಕೆಗಳಿಗೆ ಸವಾಲು ಮಾಡಿದಾಗ, ದೇವರು ಉದಯವಾಗುತ್ತಾನೆ. ಅಧರ್ಮ ಮತ್ತು ಧರ್ಮದ ನಡುವಿನ ಯುದ್ಧಕ್ಕೆ ಸಾಕ್ಷಿಯಾಗಲು ಸಿದ್ಧರಾಗಿ!” ಎಂದು ಘೋಷಿಸಲಾಗಿದೆ.
ಈ ಸಿನಿಮಾ ಹಿಂದಿ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ 3D ಮಾದರಿಯಲ್ಲಿ ತಯಾರಾಗಿದ್ದು, ಶೀಘ್ರದಲ್ಲೇ ನಿಮ್ಮ ಹತ್ತಿರದ ಥಿಯೇಟರ್ಗಳಲ್ಲಿ ತೆರೆಗೆ ಬರಲಿದೆ.
ನರಸಿಂಹನ ಅವತಾರ:
ಮೋಷನ್ ಪೋಸ್ಟರ್ನಲ್ಲಿ ವಿಷ್ಣು ಅವತಾರವಾದ ನರಸಿಂಹನ ಮಹಾತ್ಮೆಯನ್ನು ತೋರಿಸಲಾಗಿದೆ. ನರಸಿಂಹ ದೇವರು, ವಿಷ್ಣುವಿನ ನಾಲ್ಕನೇ ಅವತಾರವಾಗಿ, ಅಸುರ ಸಾಮ್ರಾಟ ಹಿರಣ್ಯಕಶಿಪುವನ್ನು ಸಂಹರಿಸಲು ಅವತರಿಸಿದ್ದ ಮಹಾವೀರ.
ನರಸಿಂಹನ ಆಕೃತಿ: ಮನುಷ್ಯನ ದೇಹ ಮತ್ತು ಸಿಂಹದ ಮುಖ ಹಾಗೂ ಬಲಿಷ್ಠ ಗಜಕಾಯದ ರೂಪದಲ್ಲಿ ನರಸಿಂಹ ದೇವರು ಅವತರಿಸಿದ್ದನು.
ಹೊಂಬಾಳೆ ಫಿಲ್ಮ್ಸ್, ಕೆಜಿಎಫ್ ಮತ್ತು ಕಾಂತಾರ ಸಿನಿಮಾಗಳ ಯಶಸ್ಸಿನ ಬಳಿಕ, ಈ ಮಹಾಕಾವ್ಯದ ಅನಿಮೇಷನ್ ಪ್ರಾಜೆಕ್ಟ್ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಗಮನ ಸೆಳೆಯಲು ಸಜ್ಜಾಗಿದೆ.