ವಿಯೆನ್ನಾ: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಅನೇಕ ದಿನಗಳಿಂದ ವಿದೇಶ ಪ್ರಯಾಣ ಕೈಗೊಂಡಿದ್ದು, ಇಂದು ಆಸ್ಟ್ರಿಯಾ ದೇಶವನ್ನು ತಲುಪಿದ್ದಾರೆ. 41 ವರ್ಷಗಳ ನಂತರ ಭಾರತದ ಪ್ರಧಾನಿ ಆಸ್ಟ್ರಿಯಾ ದೇಶಕ್ಕೆ ಭೇಟಿ ನೀಡಿದ್ದಾರೆ. ಕಳೆದ ಎರಡು ಅವಧಿಗಳಲ್ಲಿ ಪ್ರಧಾನಿ ಮೋದಿಯವರು, ತಾವು ಪ್ರಮಾಣ ವಚನ ಸ್ವೀಕರಿಸಿದ ನಂತರ, ಮೊದಲು ಭಾರತದ ನೆರೆಯ ರಾಷ್ಟ್ರಗಳಿಗೆ ಭೇಟಿ ನೀಡಿದ್ದರು. ಆದರೆ ತಮ್ಮ ಮೂರನೇ ಅವಧಿಯಲ್ಲಿ ತಮ್ಮ ಮೊದಲ ಪ್ರಯಾಣವನ್ನು ಮಾಡಿದ್ದಾರೆ.
“ನನ್ನ ಮೂರನೇ ಅವಧಿಯ ಆರಂಭದಲ್ಲಿಯೇ ನನಗೆ ಆಸ್ಟ್ರಿಯಾಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿದ್ದಕ್ಕೆ ನನಗೆ ಸಂತೋಷವಾಗಿದೆ. ನನ್ನ ಈ ಪ್ರವಾಸವು ಐತಿಹಾಸಿಕ ಮತ್ತು ವಿಶೇಷವಾಗಿದೆ. 41 ವರ್ಷಗಳ ನಂತರ, ಭಾರತೀಯ ಪ್ರಧಾನಿಯೊಬ್ಬರು ಆಸ್ಟ್ರಿಯಾಕ್ಕೆ ಭೇಟಿ ನೀಡಿದ್ದಾರೆ…” ಎಂದು ತಮ್ಮ ಖುಷಿಯನ್ನು ವ್ಯಕ್ತಪಡಿಸಿದರು.
ಭಾರತ ಮತ್ತು ಆಸ್ಟ್ರಿಯಾ ದೇಶಗಳ ಸಂಬಂಧ ಕಳೆದ 75 ವರ್ಷಗಳಿಂದ ಸೌಹಾರ್ದತೆಯಿಂದ ನಡೆದುಕೊಂಡು ಬಂದಿದೆ. ಆಸ್ಟ್ರಿಯಾ ದೇಶದಿಂದ ಭಾರತ ಅತ್ಯಾಧುನಿಕ ಮಷಿನ್‌ಗಳು, ಮೆಕ್ಯಾನಿಕಲ್ ಅಪ್ಲೈಯನ್ಸಸ್, ರೈಲ್ವೆ ಬಿಡಿ ಭಾಗಗಳು, ಕಬ್ಬಿಣ ಹಾಗೂ ಸ್ಟೀಲ್ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತದೆ.
ಪ್ರಧಾನಿ ಮುಂದುವರೆದು “ಇಂದು, ಆಸ್ಟ್ರಿಯಾದ ಚಾನ್ಸೆಲರ್ ಕಾರ್ಲ್ ನಡುವೆ ನೆಹಮ್ಮರ್ ಮತ್ತು ನಾನು, ನಮ್ಮ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ನಾವು ಹೊಸ ಸಾಧ್ಯತೆಗಳನ್ನು ಚರ್ಚಿಸಿದ್ದೇವೆ … ಮೂಲಸೌಕರ್ಯ ಅಭಿವೃದ್ಧಿ, ನವೀಕರಿಸಬಹುದಾದ ಶಕ್ತಿ, ಜಲಜನಕ, ನೀರು ಮತ್ತು ತ್ಯಾಜ್ಯ ನಿರ್ವಹಣೆಯಂತಹ ಕ್ಷೇತ್ರಗಳಲ್ಲಿ ನಾವು ಈ ಸಂಬಂಧವನ್ನು ನೀಡಲು ನಿರ್ಧರಿಸಿದ್ದೇವೆ. ನಾವು ಪರಸ್ಪರರ ಸಾಮರ್ಥ್ಯಗಳನ್ನು ಜೋಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ…” ಎಂದು ಹೇಳುತ್ತಾ ಭಾರತ ಮತ್ತು ಆಸ್ಟ್ರಿಯಾ ದೇಶಗಳ ಸಂಬಂಧವನ್ನು ಇನ್ನಷ್ಟು ಬಲಪಡಿಸುವುದಾಗಿ ತಿಳಿಸಿದರು.