ಅಂತೂ NEET ಬಗ್ಗೆ ಮಾತನಾಡಿದ ಪ್ರಧಾನಿ; ಏನೆಂದರು ಮೋದಿ?
ನವದೆಹಲಿ: ದೇಶದಲ್ಲಿ ಕೋಲಾಹಲ ಎಬ್ಬಿಸಿದ ಎನ್ಇಇಟಿ ಪರಿಕ್ಷೆ ಗೋಲ್‌ಮಾಲ್ ಇಂದು ಸಂಸತ್ತಿನಲ್ಲಿ ಬಾರಿ ಜೋರಾಗಿ ಸದ್ದು ಮಾಡಿತು. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಪತ್ರ ಸಲ್ಲಿಸಿ, ಎನ್ಇಇಟಿ ಪರಿಕ್ಷೆ ಹಗರಣದ ಬಗ್ಗೆ ಸಂಸತ್ತಿನಲ್ಲಿ ಮಾತನಾಡುವಂತೆ ಕೇಳಿಕೊಂಡಿದ್ದರು.
ಅಂತೂ ಇಂದು ಸಂಸತ್ತಿನಲ್ಲಿ ದೇಶದ ವಿದ್ಯಾರ್ಥಿಗಳ ಪರವಾಗಿ, ಎನ್ಇಇಟಿ ಪರಿಕ್ಷೆ ಹಗರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. “ಇಂತಹ ಘಟನೆಗಳನ್ನು ತಡೆಯುವಲ್ಲಿ ಸರ್ಕಾರವು ತುಂಬಾ ಗಂಭೀರವಾಗಿದ್ದು, ನಾವು ನಮ್ಮ ಜವಾಬ್ದಾರಿಗಳನ್ನು ದಕ್ಷವಾಗಿ ಪೂರೈಸಲು ನಾವು ಒಂದೊಂದೇ ಹೆಜ್ಜೆ ಇಡುತ್ತಿದ್ದೇವೆ ಎಂದು ನಾನು ದೇಶದ ಪ್ರತಿಯೊಬ್ಬ ವಿದ್ಯಾರ್ಥಿ, ದೇಶದ ಪ್ರತಿಯೊಬ್ಬ ಯುವಕರಿಗೆ ಹೇಳುತ್ತೇನೆ. ಎನ್ಇಇಟಿ ಪ್ರಕರಣದಲ್ಲಿ ದೇಶದ ಯುವಜನರ ಭವಿಷ್ಯದ ಜೊತೆ ಆಟವಾಡುವವರನ್ನು ನಿರಂತರವಾಗಿ ಬಂಧಿಸಲಾಗುತ್ತಿದೆ, ಪರೀಕ್ಷೆಯನ್ನು ನಡೆಸುವ ಸಂಪೂರ್ಣ ವ್ಯವಸ್ಥೆಯನ್ನು ಬಲಪಡಿಸಲು ಕೇಂದ್ರ ಸರ್ಕಾರವು ಈಗಾಗಲೇ ಕಟ್ಟುನಿಟ್ಟಿನ ಕಾನೂನನ್ನು ಮಾಡುತ್ತಿದೆ.” ಎಂದು ಹೇಳಿದರು.