Politics
ನಳಂದ ವಿಶ್ವವಿದ್ಯಾಲಯದಲ್ಲಿ ನರೇಂದ್ರ ಮೋದಿ.

ನಳಂದ: ಬಿಹಾರ ರಾಜ್ಯದಲ್ಲಿ ಇರುವ ನಳಂದ ವಿಶ್ವವಿದ್ಯಾಲಯದಲ್ಲಿ ನೂತನ ಕ್ಯಾಂಪಸ್ ಕಟ್ಟಡವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ. ನೂತನ ನಳಂದ ವಿಶ್ವವಿದ್ಯಾಲಯವನ್ನು, ನಳಂದ ವಿಶ್ವವಿದ್ಯಾಲಯ ಕಾಯ್ದೆ ಮೂಲಕ 2010ರಲ್ಲಿ ಸ್ಥಾಪಿಸಲಾಗಿತ್ತು.
ಈ ವಿಶ್ವವಿದ್ಯಾಲಯ ಪ್ರಾಚೀನ ವಿಶ್ವವಿದ್ಯಾಲಯದ ಅವಶೇಷಗಳು ಇರುವ ಸ್ಥಳಕ್ಕೆ ಹತ್ತಿರವೇ ಇದೆ. ಪ್ರಾಚೀನ ನಳಂದ ವಿಶ್ವವಿದ್ಯಾಲಯಕ್ಕೆ ಅತ್ಯಂತ ಹಿಂದಿನ ಇತಿಹಾಸವಿದೆ. ಈ ವಿಶ್ವವಿದ್ಯಾಲಯವು ಗುಪ್ತರ ಕಾಲದಲ್ಲಿ ಅತ್ಯಂತ ಉನ್ನತ ಮಟ್ಟಕ್ಕೆ ಏರಿತ್ತು. ಬಹುತೇಕ ಈ ವಿಶ್ವವಿದ್ಯಾಲಯದಲ್ಲಿ ಬೌದ್ಧ ಸನ್ಯಾಸಿಗಳು ಅಧ್ಯಾಪಕರಾಗಿ ಇರುತ್ತಿದ್ದರು. ಈ ವಿಶ್ವವಿದ್ಯಾಲಯವನ್ನು ಸರಿಸುಮಾರು 11ನೇ ಶತಮಾನದಲ್ಲಿ, ಮುಹಮ್ಮದ್ ಭಕ್ತಿಯಾರ್ ಖಿಲ್ಜಿ ಎಂಬ ಕ್ರೂರಿ ಅಗ್ನಿಗೆ ಆಹುತಿ ನೀಡಿದ್ದನು.