Politics
ಮೋದಿ ಮೂರನೇ ಬಾರಿ ಪ್ರಮಾಣವಚನ ಸ್ವೀಕಾರ. ಹೇಗಿರಲಿದೆ ಭದ್ರತೆ?
ನವದೆಹಲಿ: ನಿನ್ನೆ ಶುಕ್ರವಾರ ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಅವರು ಹೊರಡಿಸಿದ ಆದೇಶದ ಪ್ರಕಾರ, ಜೂನ್ 9 ರಂದು ಮೂರನೇ ಅವಧಿಗೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ತಯಾರಿಯಲ್ಲಿ ದೆಹಲಿ ಪೊಲೀಸರು ನಿಷೇಧಾಜ್ಞೆಗಳನ್ನು ವಿಧಿಸಿದ್ದಾರೆ ಮತ್ತು ರಾಷ್ಟ್ರ ರಾಜಧಾನಿಯನ್ನು ವಿಮಾನಯಾನ ನಿಷೇಧಿತ ವಲಯವೆಂದು ಘೋಷಿಸಿದ್ದಾರೆ. ಜೂನ್ 9 ಮತ್ತು 10 ರಂದು ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.
“ಕೆಲವು ಕ್ರಿಮಿನಲ್, ಸಮಾಜ-ವಿರೋಧಿ ಅಂಶಗಳು ಅಥವಾ ಭಾರತಕ್ಕೆ ದ್ವೇಷದ ಭಯೋತ್ಪಾದಕರು ಸಾರ್ವಜನಿಕರು, ಹಾಗೂ ಗಣ್ಯರು ಸುರಕ್ಷತೆಗೆ ಬೆದರಿಕೆಯನ್ನು ಉಂಟುಮಾಡಬಹುದು ಎಂದು ವರದಿಯಾಗಿದೆ.” ಎಂದು ಅರೋರಾ ಆದೇಶದಲ್ಲಿ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ರಾಷ್ಟ್ರ ರಾಜಧಾನಿ ಜೂನ್ 09 ರಂದು ಸುರಕ್ಷತೆಯ ದೃಷ್ಟಿಯಿಂದ ಎಲ್ಲೆಲ್ಲೂ ಕಣ್ಗಾವಲು ಇರಲಿದೆ. ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಜಗತ್ತಿನ ಪ್ರಮುಖ ನಾಯಕರು ಸೇರಿ ಸುಮಾರು 8000 ಜನರು ಉಪಸ್ಥಿತರಿರುವರು ಎಂದು ಹೇಳಲಾಗುತ್ತಿದೆ.