
ಮಾಸ್ಕೋ: ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಪ್ರಸ್ತುತ ರಷ್ಯಾ ಪ್ರವಾಸದಲ್ಲಿ ಇದ್ದಾರೆ. ಈ ಸಂದರ್ಭದಲ್ಲಿ ಮೋದಿಯವರಿಗೆ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಸೆಂಟ್ ಆಂಡ್ರ್ಯೂ ದ ಅಪೋಸ್ಟಲ್’ ನ್ನು ನೀಡಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗೌರವಿಸಿದರು.
ಯಾರು ಈ ಸೆಂಟ್ ಆಂಡ್ರ್ಯೂ ದ ಅಪೋಸ್ಟಲ್?
ಇವರು ಯೇಸುವಿನ ಮೊದಲ ಅನುಯಾಯಿ ಎಂದು ಹೆಸರುವಾಸಿಯಾಗಿದ್ದಾನೆ. ಜೀಸಸ್ ಶಿಲುಬೆಗೇರಿಸಿದ ನಂತರ ಅವರ ಮಿಷನರಿ ಪ್ರಯಾಣಕ್ಕಾಗಿ ಇವರು ಹೆಸರುವಾಸಿಯಾಗಿದ್ದಾರೆ, ಅವರು ಮೆಡಿಟರೇನಿಯನ್ ಪ್ರದೇಶದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಬೋಧಿಸಿದರು. ಆ ಸಮಯದಲ್ಲಿ, ಅವರು ಬೈಜಾಂಟಿಯಮ್ ನಗರದಲ್ಲಿ ಆರಂಭಿಕ ಸಾಂಪ್ರದಾಯಿಕ ಚರ್ಚ್ ಅನ್ನು ಸ್ಥಾಪಿಸಿದರು. ಎಂದು ಹೇಳಲಾಗುತ್ತದೆ.
2019 ರಲ್ಲಿ ಭಾರತದಲ್ಲಿ ಸ್ಥಾಪಿತವಾಗಿರುವ ರಷ್ಯಾದ ರಾಯಭಾರ ಕಚೇರಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು ಎಂದು ತಿಳಿಸಿತ್ತು. ಉಕ್ರೇನ್ ದೇಶದೊಂದಿಗಿನ ಯುದ್ಧದ ಮಧ್ಯೆ ಪುಟಿನ್ ಅವರು ಚೀನಾ ಹಾಗೂ ಉತ್ತರ ಕೋರಿಯಾ ದೇಶಗಳಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅನೇಕ ಒಪ್ಪಂದಗಳಿಗೆ ಸಹಿ ಕೂಡ ಹಾಕಲಾಗಿತ್ತು. ಇದೇ ಕಾರಣಕ್ಕೆ ನರೇಂದ್ರ ಮೋದಿಯವರು ಸಾಕಷ್ಟು ಸಮಯದ ನಂತರ ರಷ್ಯಾ ಪ್ರವಾಸವನ್ನು ಕೈಗೊಂಡು, ವಿದೇಶಾಂಗ ನೀತಿಯನ್ನು ಹೆಣೆಯಲು ಮುಂದಾಗಿದ್ದಾರೆ.