ದೇಶದ ಮೊಟ್ಟಮೊದಲ ಅಂತರ್ಜಲ ಮೆಟ್ರೋ ಮಾರ್ಗ ಉದ್ಘಾಟಿಸಿದ ಪಿಎಂ ಮೋದಿ.

ಕಳೆದ ಐದು ವರ್ಷದಲ್ಲಿ ಎರಡನೇ ಬಾರಿಗೆ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು, ಮಾರ್ಚ್ 06, ಬುಧವಾರ, ಕಲ್ಕತ್ತಾದಲ್ಲಿ ಸುಮಾರು ₹15,400 ಕೋಟಿ ರೂಪಾಯಿ ಮೊತ್ತದ ವಿವಿಧ ಯೋಜನೆಗಳನ್ನು ಉದ್ಘಾಟಿಸಿ ಮತ್ತು ಅಡಿಪಾಯ ಇಟ್ಟಿದ್ದಾರೆ. ಇವುಗಳಲ್ಲಿಯೇ ಅತ್ಯಂತ ಗಮನ ಸೆಳೆದಿದ್ದು ಅಂತರ್ಜಲ ಮೆಟ್ರೋ ಮಾರ್ಗದ ಉದ್ಘಾಟನೆ.
ಪ್ರಧಾನಿ ನರೇಂದ್ರ ಮೋದಿಯವರು ಕಲ್ಕತ್ತಾ ಮೆಟ್ರೋದ ಪೂರ್ವ-ಪಶ್ಚಿಮ ಕಾರಿಡಾರ್‌ನ ಹೌರಾ ಮೈದಾನ್-ಎಸ್‌ಪ್ಲೇನೇಡ್ ವಿಭಾಗವನ್ನು ಉದ್ಘಾಟಿಸಿದರು. ಇದು ಭಾರತದ ಮೊಟ್ಟ ಮೊದಲ ಅಂತರ್ಜಲ ಮೆಟ್ರೋ ಮಾರ್ಗ ಸೇವೆಯಾಗಿದೆ. ಕಲ್ಕತ್ತಾ ಮೆಟ್ರೋ ಪ್ರಾಧಿಕಾರ ಅಧಿಕೃತವಾಗಿ ತಿಳಿಸಿರುವ ಪ್ರಕಾರ ಪೂರ್ವ-ಪಶ್ಚಿಮ ಮೆಟ್ರೋದ 4.8 ಕಿಲೋಮೀಟರ್ ವಿಸ್ತರಣೆಯನ್ನು ₹4,965 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಹಾಗೆಯೇ, ಹೌರಾ ದೇಶದಲ್ಲಿಯೇ ಅತ್ಯಂತ ಆಳವಾದ ಮೆಟ್ರೋ ನಿಲ್ದಾಣವನ್ನು ಹೊಂದಲಿದೆ. ಇದು ನೆಲಮಟ್ಟದಿಂದ 30 ಮೀಟರ್ ಕೆಳಗೆ ಇರಲಿದೆ ಎಂದು ತಿಳಿಸಿದ್ದಾರೆ. ಈ ಅಂತರ್ಜಲ ಮೆಟ್ರೋ ಮಾರ್ಗದಿಂದ ಐಟಿ ಹಬ್‌ಗಳಾದ ಸಾಲ್ಟ್ ಲೇಕ್ ಸೆಕ್ಟರ್ ವಿ ನಂತಹ ಪ್ರಮುಖ ಪ್ರದೇಶಗಳಿಗೆ ಸಂಪರ್ಕ ನೀಡಲು ಈ ಕಾರಿಡಾರ್ ಸಹಾಯ ಮಾಡುತ್ತದೆ.
ಈ ಅಂತರ್ಜಲ ಮೆಟ್ರೋ ಮಾರ್ಗದ ಅನುಕೂಲ ಹಾಗೂ ಅನಾನುಕೂಲಗಳನ್ನು ಗಮನಿಸಿದರೆ ಈ ಅಂಶಗಳು ನಮ್ಮ ಕಣ್ಣ ಮುಂದೆ ಬರುತ್ತವೆ.
- ಅನುಕೂಲಗಳು:-
• ನೀರಿನೊಳಗಿನ ಜಾಗವನ್ನು ಬಳಸುವುದರಿಂದ ಭೂಮಿ ಲಭ್ಯತೆಯ ಸೀಮಿತವಾಗಿರುವ ನಗರ ಪ್ರದೇಶಗಳಲ್ಲಿ ಟ್ರಾಫಿಕ್ ದಟ್ಟಣೆಯನ್ನು ನಿವಾರಿಸಬಹುದು.
• ಭೂಗತ ಮಾರ್ಗಗಳು ಮೇಲ್ಮೈ ಪರಿಸರ ವ್ಯವಸ್ಥೆಗಳಿಗೆ ಅಡ್ಪಡಿಸುವುದನ್ನು ಕಡಿಮೆ ಮಾಡುತ್ತದೆ ಹಾಗೆಯೇ ಶಬ್ದ ಮಾಲಿನ್ಯವನ್ನು ಕೂಡ ಕಡಿಮೆ ಮಾಡುತ್ತಾರೆ.
• ನೀರಿನೊಳಗಿನ ನೇರ ಮಾರ್ಗಗಳು ತ್ವರಿತ ಪ್ರಯಾಣಕ್ಕೆ ಹೆಚ್ಚು ಉತ್ತಮವಾಗಿದೆ.
• ಈ ಸೇವೆಯಿಂದ ಪ್ರತ್ಯೇಕವಾದ ಪ್ರದೇಶಗಳನ್ನು ಸಂಪರ್ಕಿಸಬಹುದು, ಹಾಗೆಯೇ ಅಲ್ಲಿನ ನಿವಾಸಿಗಳಿಗೆ ಆರ್ಥಿಕ ಅವಕಾಶಗಳನ್ನು ಸುಧಾರಿಸುತ್ತದೆ. - ಅನಾನುಕೂಲಗಳು:-
• ನೀರಿನೊಳಗಿನ ಸುರಂಗಗಳು ಭೂಕಂಪಗಳು, ಪ್ರವಾಹಗಳು ಅಥವಾ ಇತರ ನೈಸರ್ಗಿಕ ವಿಕೋಪಗಳಿಂದ ಹಾನಿಯಾಗುವ ಅಪಾಯವನ್ನು ಹೊಂದಿರಬಹುದು.
• ನಿರ್ಮಾಣ ಚಟುವಟಿಕೆಗಳು ಮತ್ತು ಸುರಂಗ ಕಾರ್ಯಾಚರಣೆಗಳು ಸಮುದ್ರ ಪರಿಸರ ವ್ಯವಸ್ಥೆಗಳನ್ನು ತೊಂದರೆಗೊಳಿಸಬಹುದು.
ಹೀಗೆ ಅನುಕೂಲ ಹಾಗೂ ಅನಾನುಕೂಲಗಳನ್ನು ಹೊಂದಿರುವ ಈ ಮೆಟ್ರೋ ಸೇವೆಯು, ಆದಷ್ಟು ಜನರಿಗೆ ಉಪಯೋಗವನ್ನೇ ಉಂಟುಮಾಡಲಿ ಎಂಬುದು ಎಲ್ಲರ ಬಯಕೆ.