Alma Corner

ಭೀಕರ ರಸ್ತೆಅಪಘಾತ: ಒಂದೇ ಕುಟುಂಬದ 6 ಮಂದಿ ದುರ್ಮರಣ…!

ನೆಲಮಂಗಲ ಭೀಕರ ರಸ್ತೆ ಅಪಘಾತ ; ಒಂದೇ ಕುಟುಂಬದ 6 ಜನರ ದುರ್ಮರಣ !
ಬೆಂಗಳೂರು: ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲಮಂಗಲದ ಟಿ ಬೇಗೂರಿನಲ್ಲಿ ಶನಿವಾರ ಭೀಕರ ಅಪಫಾತ ಸಂಭವಿಸಿದ್ದು ಕೋಟಿ ಬೆಲೆ ಬಾಳುವ ಐಷಾರಾಮಿ ವೋಲ್ವೋ ಕಾರಿನಲ್ಲಿದ್ದ ಸಾಫ್ಟವೇರ್ ಉದ್ಯಮಿ ಸಹಿತ ಕುಟುಂಬದ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉದ್ಯಮಿ ಕುಟುಂಬದ ಸದಸ್ಯರು ಬೆಂಗಳೂರಿನಿಂದ ತುಮಕೂರು ಕಡೆ ತೆರುಳುತ್ತಿದ್ದ ವೇಳೆ ಎದುರಿನಿಂದ ಬಂದ ಕಂಟೇನರ್‌ ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಇವರ ವೋಲ್ವೋ ಕಾರಿನ ಮೇಲೆ ಪಲ್ಟಿಯಾಗಿದೆ. ಕಂಟೇನರ್‌ ಪಲ್ಟಿಯಾಗಿದ್ದರಿಂದ ಕಾರು ರಸ್ತೆಯಲ್ಲೇ ಅಪ್ಪಚ್ಚಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಅಪಫಾತದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಟೇನರ್‌ ಚಾಲಕ ಆರೀಫ್‌ ಅನ್ಸಾರಿ ವಿರುದ್ಧ ನೆಲಮಂಗಲ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಅಪಫಾತದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಈ ದ್ರಶ್ಯಾವಳಿಗಳು ತನಿಖೆಗೆ ಪ್ರಮುಖ ಸಾಕ್ಷಿಯಾಗಿವೆ.

ಮೃತ ಸಾಫ್ಟವೇರ್ ಉದ್ಯಮಿ ಚಂದ್ರಮ್‌ ಏಗಪ್ಪಗೋಳ ಅವರ ಸಹೋದರ ಡಾ.ಮಲ್ಲಿನಾಥ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕೊಂಡಿದ್ದು, ದೃಶ್ಯ ಆಧರಿಸಿ ಡಿವೈಎಸ್‌ಪಿ ತನಿಖೆ ನೆಡೆಸುತ್ತಿದ್ದಾರೆ. ʼಕಂಟೇನರ್‌ ಚಾಲಕನ ನಿರ್ಲಕ್ಷ್ಯದಿಂದ ಅನಾಹುತ ಸಂಭವಿಸಿದೆ. ಅಪಫಾತದಲ್ಲಿ ಚಾಲಕನ ಕಾಲಿಗೆ ಸಣ್ಣಪುಟ್ಟ ಗಾಯಾವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆʼ. ಎಂದು ಪೊಲೀಸರು ತಿಳಿಸಿದ್ದಾರೆ. ಆಪಫಾತಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ʼಅಪಫಾತಕ್ಕೆ ಕಾರಣವಾದ ಕಾರು ಯಾವುದು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ. ವೋಲ್ವೋ ಕಾರಿನ ಡ್ಯಾಷ್‌ ಬೋರ್ಡ್‌ನ ಕ್ಯಮೆರಾಗಳು ಸಂಪೂರ್ಣ ನಚ್ಚುಗಚ್ಚು ಆಗಿದೆ. ಮೃತ ಚಂದ್ರಮ್‌ ಅವರ ಐಫೋನ್‌ ವಶಕ್ಕೆ ಮಡೆಯಾಲಗಿದ್ದು, ಅವರ ಪಾಸ್‌ವರ್ಡ್‌ ಪತ್ತೆಯಾಗಿಲ್ಲ. ಹಾಗಾಗಿ ವಿಧಿ ವಿಜ್ಞಾನ ಪ್ರಯೋಗಲಯಕ್ಕೆ ಕಳುಹಿಸಲಾಗಿದೆʼ ಎಂದು ಹೇಳಿದರು. ಅಪಫಾತದಲ್ಲಿ ಮೃತಪಟ್ಟ ಆರು ಜನರ ಆಂತ್ಯಕ್ರಿಯೆ ಭಾನುವಾರ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್‌ ತಾಲ್ಲೂಕಿನ ಮೊರಬಗಿ ಗ್ರಾಮದಲ್ಲಿ ನಡೆಯಿತು.
ಸ್ಥಳೀಯ ಪ್ರದೇಶದಲ್ಲಿ ಅಪಫಾತಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ, ಪೊಲೀಸರು ಮತ್ತು ಸಂಬಂಧಿತ ಅಧಿಕಾರಿಗಳು, ರಸ್ತೆ ಸುರಕ್ಷತೆ ಕ್ರಮಗಳನ್ನು ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ.

ಗೌತಮಿ ಎಂ

ಆಲ್ಮಾ ಮೀಡಿಯಾ ಸ್ಕೂಲ್‌ ವಿದ್ಯಾರ್ಥಿನಿ

Show More

Related Articles

Leave a Reply

Your email address will not be published. Required fields are marked *

Back to top button