CinemaEntertainment
ಗಣೇಶ್‌ಗೆ ರಮೇಶ್‌ಗೆ ಏನು ಸಂಬಂಧ?!

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅವರ ಹುಟ್ಟು ಹಬ್ಬದ ದಿನವಾದ ಇಂದು, ಅವರ ಅಭಿಮಾನಿಗಳಿಗೆ ಒಂದು ಪೋಸ್ಟರ್ ತಲೆ ಕೆಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟರ್ ಬಾರಿ ಸದ್ದು ಮಾಡಿದೆ. ಹಾಗಾದರೆ ಏನಿದೆ ಆ ಪೋಸ್ಟರ್ ನಲ್ಲಿ?

ಒಂದು ಪತ್ರ, ಅದರ ಮೇಲೊಂದು ವಿಸಿಲ್, ಪತ್ರದ ಮೇಲೆ ಎರಡು ಸ್ಟಾಂಪ್‌ಗಳು, ಒಂದು ಗಣೇಶ್ ಅವರದ್ದು, ಇನ್ನೊಂದು ರಮೇಶ್ ಅರವಿಂದ್ ಅವರದ್ದು, ವಿಖ್ಯಾತ್ ಹಾಗೂ ತಂಡದವರಿಂದ, 16ನೇ ಆಗಸ್ಟ್, 2024ರಂದು ಮೊದಲ ಲುಕ್ ಡೆಲಿವರಿ ಮಾಡಲಾಗುವುದು ಎಂದು ಬರೆದುಕೊಂಡಿದೆ.
ಗಣೇಶ್ ಹಾಗೂ ರಮೇಶ್ ಏನಿದು ಸಂಬಂಧ? “ದ ಗ್ರೇಟೆಸ್ಟ್ ಶೋ ಎವರ್” ಅಂದರೆ ಏನು? ಇವೆಲ್ಲದಕ್ಕೂ ಉತ್ತರ ಸದ್ಯದಲ್ಲೇ ಚಿತ್ರ ತಂಡ ನೀಡಲಿದೆ.