“ವಿರೋಧ ಪಕ್ಷದವರು ಮುಸ್ಲಿಂ ಸಹೋದರರನ್ನು ದಾರಿ ತಪ್ಪಿಸುತ್ತಿದ್ದಾರೆ. ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಕಿರುಕುಳ ಎದುರಿಸಿ ಭಾರತಕ್ಕೆ ಬಂದವರಿಗೆ ಮಾತ್ರ ಪೌರತ್ವವನ್ನು ನೀಡಲು ಸಿಎಎನಲ್ಲಿ ಉದ್ದೇಶಿಸಲಾಗಿದೆ. ಇದನ್ನು ಯಾವುದೇ ಭಾರತೀಯರ ಪೌರುತ್ವವನ್ನು ಕಸಿದುಕೊಳ್ಳುವುದಕ್ಕೆ ಬಳಸುವುದಿಲ್ಲ.” ಎಂದು ಗೃಹ ಸಚಿವ ಅಮಿತ್ ಶಾ ಅವರು ಇಂದು ಗ್ಲೋಬಲ್ ಬಿಸಿನೆಸ್ ಶೃಂಗಸಭೆಯಲ್ಲಿ ಹೇಳಿದ್ದಾರೆ.
2019ರಲ್ಲಿ ಸಂಸತ್ತಿನಲ್ಲಿ ಪಾಸ್ ಆಗಿದ್ದ ಪೌರತ್ವ ಕಾಯ್ದೆ, ದೇಶದಲ್ಲಿ ಅನೇಕ ಜನರ ಅಸಮಾಧಾನ ಹಾಗೂ ಪ್ರತಿಭಟನೆಗೆ ಕಾರಣವಾಗಿತ್ತು.
2024ರಲ್ಲಿ ಎನ್ಡಿಎ ಪಕ್ಷ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಹಾಗೂ ಬಿಜೆಪಿ ಒಂದೇ 370 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂಬ ಪ್ರಧಾನಿ ಮೋದಿಯವರ ಹೇಳಿಕೆಯ ಮೇಲೆ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಅವರ ಭಾರತ ಜೋಡೋ ನ್ಯಾಯ ಯಾತ್ರೆ ಬಗ್ಗೆ ಪ್ರತಿಕ್ರಿಯಿಸಿರುವ ಅಮಿತ್ ಶಾ ಅವರು, 1947ರಲ್ಲಿ ಭಾರತ ವಿಭಜನೆಯಾಗಲು ಕಾರಣವಾದ ಕಾಂಗ್ರೆಸ್ ಪಕ್ಷದಿಂದ ದೇಶದ ಒಗ್ಗೂಡಿಸಲು ಮಾಡುವ ಯಾತ್ರೆಯನ್ನು ನೀಡಲಾಗುವುದಿಲ್ಲ. ಎಂದು ಟೀಕಿಸಿದರು.