Bengaluru

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎನ್ಐಎ ಭರ್ಜರಿ ಬೇಟೆ: ಹಿಜ್ಬ್-ಉತ್-ಥಹ್ರೀರ್ ಪ್ರಮುಖ ಆರೋಪಿ ಬಂಧನ!

ಬೆಂಗಳೂರು: ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತಮಿಳುನಾಡು ಹಿಜ್ಬ್-ಉತ್-ಥಹ್ರೀರ್ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಶಂಕಿತ ಅಜೀಝ್ ಅಹಮದ್, ಅಲಿಯಾಸ್ ಜಲೀಲ್ ಅಜೀಝ್ ಅಹಮದ್, ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಬಂಧಿಸಲಾಯಿತು ಎಂದು ಎನ್ಐಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

RC 01/2024/NIA/CHE ಪ್ರಕರಣವನ್ನು ಎನ್ಐಎ ಆರು ಆರೋಪಿಗಳ ವಿರುದ್ಧ ದಾಖಲಿಸಿತ್ತು. ಈ ಆರೋಪಿಗಳು ಹಿಜ್ಬ್-ಉತ್-ಥಹ್ರೀರ್ ಎಂಬ ಅಂತರರಾಷ್ಟ್ರೀಯ ಪ್ಯಾನ್-ಇಸ್ಲಾಮಿಸ್ಟ್ ಮತ್ತು ತೀವ್ರವಾದಿ ಸಂಘಟನೆಯ ಮೂಲಭೂತವಾದಿ ಸಿದ್ಧಾಂತಗಳಿಂದ ಪ್ರೇರಿತರಾಗಿದ್ದರು. ಈ ಸಂಸ್ಥೆಯು ಭಾರತದಲ್ಲಿ ಖಲೀಫತ್ ಸ್ಥಾಪನೆ ಮತ್ತು ಅದರ ಸಂಸ್ಥಾಪಕ ತಖಿ ಅಲ್-ದಿನ್ ಅಲ್-ನಭಾನಿ ಬರೆದ ಸಂವಿಧಾನವನ್ನು ಜಾರಿಗೆ ತರಲು ಹೋರಾಡುತ್ತಿದೆ.

ಎನ್ಐಎ ತನಿಖೆಯ ಪ್ರಕಾರ, ಆರೋಪಿಗಳು ಗುಪ್ತ ಭಾಷಣಗಳನ್ನು (ಬಯಾನ್ಸ್) ಆಯೋಜಿಸಿದ್ದರು, ಅಲ್ಲಿ ಅನೇಕ ಯುವಕರನ್ನು ತೀವ್ರವಾದಿ ಸಿದ್ಧಾಂತಗಳ ಮೂಲಕ ಪ್ರಚೋದಿಸಲಾಯಿತು. ಹಿಜ್ಬ್-ಉತ್-ಥಹ್ರೀರ್‌ನ ಉದ್ದೇಶವನ್ನು ಸಾಧಿಸಲು ಭಾರತ ವಿರೋಧಿ ಫೋರ್ಸ್‌ಗಳಿಂದ ಸೈನಿಕ ಸಹಾಯವನ್ನು (ನಸ್‌ರಾ) ಕೇಳಿಕೊಂಡಿದ್ದರು. ಅಜೀಝ್ ಅಹಮದ್, ಈ ಬಯಾನ್ಸ್‌ಗಳ ಪ್ರಮುಖ ಪ್ರೇರಕ ಎಂದು ಪತ್ತೆಯಾಗಿದ್ದಾನೆ.

ಈ ಪ್ರಕರಣವು ದೇಶಾದ್ಯಾಂತ ಚರ್ಚೆಗೆ ಗ್ರಾಸವಾಗಿದ್ದು, ಆಮಿಷದ ಹಾದಿಯಲ್ಲಿ ಸಿಲುಕಿ ದೇಶದ ಸುರಕ್ಷತೆಗೆ ದೊಡ್ಡ ಸವಾಲನ್ನು ಸೃಷ್ಟಿಸುವಂತಹ ಘಟನೆಗಳನ್ನು ನಿಜಕ್ಕೂ ಗಂಭೀರವಾಗಿ ಪರಿಗಣಿಸಬೇಕಾದ ಅನಿವಾರ್ಯತೆಯನ್ನು ಈ ಪ್ರಕರಣ ತೋರಿಸಿದೆ.

Show More

Related Articles

Leave a Reply

Your email address will not be published. Required fields are marked *

Back to top button