ನವದೆಹಲಿ: ರಾಷ್ಟ್ರೀಯ ತನಿಕ ಸಂಸ್ಥೆ ಇಂದು ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ ತಲೆಮರೆಸಿಕೊಂಡು ಮುಖ್ಯ ಆರೋಪಿಗಳ ಭಾವಚಿತ್ರವನ್ನು ಬಿಡುಗಡೆ ಮಾಡಿದೆ. ಅಬ್ದುಲ್ ಮಥೀನ್ ಅಹಮದ್ ತಾಹಾ (30), ಮುಸ್ಸಾವಿರ್ ಹುಸೈನ್ ಶಾಝಿಬ್ (30), ಇವರೇ ಮುಖ್ಯ ಆರೋಪಿಗಳಾಗಿದ್ದಾರೆ.
ಮಾರ್ಚ್ 1, 2024 ರಂದು ಬೆಂಗಳೂರಿನ ವೈಟ್ ಫೀಲ್ಡ್ ಏರಿಯಾದ ಬಳಿ ಇರುವ ರಾಮೇಶ್ವರಂ ಕೆಫೆಯಲ್ಲಿ ಮಧ್ಯಾಹ್ನ ಸರಿಸುಮಾರು 12:30ಕ್ಕೆ ಸ್ಪೋಟ ಸಂಭವಿಸಿತ್ತು. ರಾಜ್ಯವನ್ನೇ ಬೆಚ್ಚಿಬಿಳಿಸಿದ ಈ ಘಟನೆಯನ್ನು ಕೈಗೆ ತೆಗೆದುಕೊಂಡು ರಾಷ್ಟ್ರೀಯ ತನಿಕಾ ಸಂಸ್ಥೆ ಆರೂಪಿಗಳ ಸಿಸಿಟಿವಿ ಚಿತ್ರಾವಳಿಗಳನ್ನು ಬಿಡುಗಡೆ ಮಾಡಿತ್ತು. ಮಾಸ್ಕ್ ಹಾಗೂ ಕ್ಯಾಪ್ ಧರಿಸಿದ್ದ ಆರೋಪಿಯ ಸರಿಯಾದ ಭಾವಚಿತ್ರವನ್ನು ಈಗ ರಾಷ್ಟ್ರೀಯ ತನಿಕಾ ಸಂಸ್ಥೆ ಬಿಡುಗಡೆ ಮಾಡಿದೆ.
ತಲೆ ತಪ್ಪಿಸಿಕೊಂಡಿರುವ ಇಬ್ಬರು ಆರೋಪಿಗಳ ಸುಳಿವನ್ನು ನೀಡಿದವರಿಗೆ ತಲಾ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ತನಿಕಾ ಸಂಸ್ಥೆಯು ಈಗಾಗಲೇ ತಿಳಿಸಿದೆ. ಚುನಾವಣೆಯ ಬೆನ್ನಲ್ಲೇ ಈ ರೀತಿಯ ಘಟನೆಗಳು ದೇಶದಲ್ಲಿ ಇನ್ನಷ್ಟು ಭದ್ರತೆಯ ಲೋಪವನ್ನು ಎತ್ತಿ ಕಾಣಿಸುತ್ತಿದೆ. ಈ ಎರಡು ಆರೋಪಿಗಳು ಇಸ್ಲಾಮಿಕ್ ಸ್ಟೇಟ್ ಸಂಘಟನೆಗೂ ಕೂಡ ಲಿಂಕ್ ಹೊಂದಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ಕಂಡು ಬಂದಿದೆ.