Finance

ನಿಫ್ಟಿ, ಸೆನ್ಸೆಕ್ಸ್ ಇಂದಿನ ಓಟ: ಸ್ಟಾಕ್ ಮಾರುಕಟ್ಟೆಯಲ್ಲಿ ಹಿಂಜರಿಕೆ, ಒಲಾ ಎಲೆಕ್ಟ್ರಿಕ್ ಶೇರುಗಳಲ್ಲಿ ಏರಿಕೆ!

ಮುಂಬೈ: ಇಂದು ಬುಧವಾರದ ಆರಂಭದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ 50 ಮಿಶ್ರ ಪ್ರದರ್ಶನ ನೀಡಿದವು. ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 12.50 ಪಾಯಿಂಟ್ ಇಳಿಮುಖ, 78,571.31 ಪಾಯಿಂಟ್‌ಗಳಿಗೆ ತಲುಪಿದರೆ, ನಿಫ್ಟಿ 50 19.65 ಪಾಯಿಂಟ್ ಏರಿಕೆ ಕಂಡು 23,758.90 ಪಾಯಿಂಟ್ ತಲುಪಿದೆ.

ಕಳೆದ ದಿನದ ಮುಖ್ಯ ಹೈಲೈಟ್ಸ್:

  • ಇನ್ಡಸ್‌ಇಂಡ್ ಬ್ಯಾಂಕ್ 1.79% ಏರಿಕೆ (₹1,066.90)
  • ಟೈಟಾನ್ ಕಂಪೆನಿ 1.13% ಏರಿಕೆ (₹3,639.65)
  • ಬಜಾಜ್ ಫೈನಾನ್ಸ್ 0.98% ಏರಿಕೆ (₹8,563.15)
  • ಎಷಿಯನ್ ಪೇಂಟ್ಸ್ ಶೇರುಗಳು 4.28% ಕುಸಿತ (₹2,254.40)
  • ನೆಸ್ಲೆ ಇಂಡಿಯಾ 2.41% ಕುಸಿತ (₹2,245.00)

EV ಸೆಕ್ಟರ್‌ನಲ್ಲಿ ಹಲ್‌ಚಲ್:
ಒಲಾ ಎಲೆಕ್ಟ್ರಿಕ್ ತನ್ನ “ರೋಡ್ಸ್ಟರ್ X” ಎಲೆಕ್ಟ್ರಿಕ್ ಬೈಕ್ ಅನ್ನು ಇಂದು ಬಿಡುಗಡೆ ಮಾಡುತ್ತಿದೆ. ಈ ಹಿನ್ನಲೆಯಲ್ಲಿ, ಒಲಾ ಶೇರುಗಳು 1.10% ಏರಿಕೆ ಕಂಡು ₹75.69 ದರದಲ್ಲಿ ವಹಿವಾಟು ನಡೆದಿದೆ.

ನಿಫ್ಟಿ ಸೆಕ್ಟೋರಲ್ ಪರ್ಫಾರ್ಮೆನ್ಸ್:

  • ನಿಫ್ಟಿ ಆಯಿಲ್ & ಗ್ಯಾಸ್ 1.20% ಏರಿಕೆ (10,607.80)
  • ನಿಫ್ಟಿ ಪಿಎಸ್‌ಯು ಬ್ಯಾಂಕ್ 1.12% ಏರಿಕೆ (6,335.20)
  • ನಿಫ್ಟಿ ಎಫ್‌ಎಂಸಿಜಿ 0.62% ಕುಸಿತ (56,918.45)

ಅಂತರಾಷ್ಟ್ರೀಯ ಮಾರುಕಟ್ಟೆ ಪ್ರಭಾವ:
ಕ್ರೂಡ್ ಆಯಿಲ್ ದರದಲ್ಲಿ ಇಳಿಮುಖ – ಬ್ರೆಂಟ್ ಕ್ರೂಡ್ ₹75.85/ಬ್ಯಾರೆಲ್ (0.46% ಇಳಿಕೆ), ವಿಸಿಟಿಐ ಕ್ರೂಡ್ ₹72.46/ಬ್ಯಾರೆಲ್ (0.33% ಇಳಿಕೆ). ಇದು ಭಾರತದ ಆಯಿಲ್ & ಗ್ಯಾಸ್ ಶೇರುಗಳ ಮೇಲೆ ನೇರ ಪರಿಣಾಮ ಬೀರಬಹುದು.

ಹಿಂದಿನ ದಿನದ ಮಾರುಕಟ್ಟೆ ರಿಪೋರ್ಟ್:
ಮಂಗಳವಾರ ಸೆನ್ಸೆಕ್ಸ್ 1,397.07 ಪಾಯಿಂಟ್ ಜಿಗಿತ, 78,583.81 ತಲುಪಿದರೆ, ನಿಫ್ಟಿ 50 378.20 ಪಾಯಿಂಟ್ ಏರಿಕೆ ಕಂಡು 23,739.25 ತಲುಪಿತು. ಮಾರುಕಟ್ಟೆಯಲ್ಲಿ ಪಿಎಸ್‌ಯು ಬ್ಯಾಂಕ್, ಆಯಿಲ್ & ಗ್ಯಾಸ್ ಮತ್ತು ಫೈನಾನ್ಸ್ ಶೇರುಗಳು ಹೆಚ್ಚಿನ ಲಾಭ ಕಂಡವು.

ನಿಮಗೆ ಗೊತ್ತೆ?
ಮಾರುಕಟ್ಟೆಯಲ್ಲಿ ಹೂಡಿಕೆದಾರರು ಡೊನಾಲ್ಡ್ ಟ್ರಂಪ್ ಅವರ ತೆರಿಗೆ ನೀತಿಯ ಬಗ್ಗೆ ಆತಂಕ ಹೊಂದಿದ್ದು, ಇದು ಅಮೇರಿಕಾದ ಮೇಲಿನ ವಹಿವಾಟು ಮಾರುಕಟ್ಟೆಗೆ ನೇರ ಪ್ರಭಾವ ಬೀರಲಿದೆ!

Show More

Related Articles

Leave a Reply

Your email address will not be published. Required fields are marked *

Back to top button