Politics
NoSelfie: ದಸರಾ ಆನೆಗಳೊಂದಿಗೆ ಸೆಲ್ಫಿಗೆ ತಡೆ! ಸಚಿವ ಈಶ್ವರ ಖಂಡ್ರೆ ಮಹತ್ವದ ಆದೇಶ..!
ಮೈಸೂರು: ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಬಂದಿರುವ ಸಾಕು ಆನೆಗಳೊಂದಿಗೆ ಫೋಟೋ, ಸೆಲ್ಫಿ, ಅಥವಾ ರೀಲ್ಸ್‌ಗಳಿಗೆ ಅವಕಾಶ ನೀಡಬಾರದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶ ಹೊರಡಿಸಿದ್ದಾರೆ. ಶಿಬಿರದಿಂದ ಕರೆತಂದ ಆನೆಗಳನ್ನು ಸುರಕ್ಷಿತವಾಗಿ ಮೆರವಣಿಗೆಯಲ್ಲಿ ತೊಡಗಿಸಿ, ಅವುಗಳನ್ನು ಮತ್ತೆ ಶಿಬಿರಕ್ಕೆ ಕಳುಹಿಸುವವರೆಗೆ ಯಾವುದೇ ಅವಘಡಗಳಿಗೆ ಅವಕಾಶ ನೀಡಬಾರದು ಎಂದು ಎಚ್ಚರಿಸಿದ್ದಾರೆ.
ಆನೆಗಳ ಸುತ್ತಮುತ್ತ ಫೋಟೋಗಳಿಗೆ ಹೋಗುವ ಜನರು, ಆನೆಗಳ ದಂತ ಅಥವಾ ಸೊಂಡಿಲು ಹಿಡಿದು ರೀಲ್ಸ್ ಮಾಡುವುದು ಆನೆಗಳನ್ನು ವಿಚಲಿತಗೊಳಿಸುತ್ತಿದೆ. ಇಂತಹ ಅಪ್ರಮುಖ ವರ್ತನೆಗಳು ಆನೆಗಳಲ್ಲಿ ಕೋಪವನ್ನು ಉಂಟುಮಾಡಿ ಅವು ಪರಸ್ಪರ ಕಾದಾಡಿಕೊಳ್ಳುವ ಹಂತ ತಲುಪಿವೆ. ಈ ಕಾರಣದಿಂದ, ಸೆಲ್ಫಿ ಮತ್ತು ರೀಲ್ಸ್‌ಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ.
“ನಮ್ಮ ಆನೆಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಯಾವುದೇ ತಪ್ಪು ನಡೆಗೆ ಎಡೆಮಾಡಿ ಕೊಡಲಾರೆವು,” ಎಂದು ಖಂಡ್ರೆ ತಿಳಿಸಿದ್ದಾರೆ.