Politics

ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧ: ಮುಖ್ಯಮಂತ್ರಿಗಳನ್ನು ಭೇಟಿಯಾದ ಮುಸ್ಲಿಂ ಮುಖಂಡರು!

ಬೆಂಗಳೂರು: ಕೇಂದ್ರ ಸರ್ಕಾರ ಶಿಫಾರಸು ಮಾಡಿದ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಲು ಅಖಿಲ ಭಾರತ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ (AIMPLB) ಸಚಿವ ಜಮೀರ್ ಅಹಮದ್ ಖಾನ್ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.

ವಕ್ಫ್ ಅಸ್ತಿತ್ವ ಮತ್ತು ಅದರ ಸಂಪತ್ತಿನ ರಕ್ಷಣೆಗೆ ಹೊಸ ಕಾಯ್ದೆಯು ಹಾನಿ ಮಾಡುತ್ತದೆ ಎಂದು ಪ್ರತಿನಿಧಿ ಮಂಡಳಿ ವರದಿ ಮಾಡಿದೆ. ಸರ್ಕಾರದ ಈ ನಡೆಗೆ ಸಂಬಂಧಿಸಿದಂತೆ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಮುಸ್ಲಿಂ ಸಮುದಾಯದಲ್ಲಿ ಆತಂಕದ ಗಾಳಿ ಬೀಸಿದೆ. ವಕ್ಫ್ ಮಂಡಳಿಯ ಸಂಪತ್ತನ್ನು ಬಲವಂತವಾಗಿ ಸರಕಾರದ ಆಸ್ಥಿಯಂತೆ ಪರಿಗಣಿಸಲು ಯೋಜನೆ ರೂಪಿಸಿರುವುದನ್ನು AIMPLB ಗಂಭೀರವಾಗಿ ಖಂಡಿಸಿದೆ.

ಸಿಎಂ ಸಿದ್ದರಾಮಯ್ಯ, ಅಖಿಲ ಭಾರತ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ (AIMPLB) ನ ಈ ವಿಚಾರದ ಬಗ್ಗೆ ಗಂಭೀರ ಸ್ಪಂದನೆ ನೀಡಿದ್ದು, ಮುಂದಿನ ಹಂತದಲ್ಲಿ ರಾಜ್ಯ ಸರ್ಕಾರ ಈ ಬಗೆಯ ಕಾಯ್ದೆಗಳನ್ನು ಸಮುದಾಯದ ಒಮ್ಮತಕ್ಕೆ ತಂದು ತಡೆಗಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ಭರವಸೆ ನೀಡಿದ್ದಾರೆ.

ಈ ಬೆಳವಣಿಗೆ ಮುಸ್ಲಿಂ ಸಮುದಾಯದಲ್ಲಿ ಕೋಲಾಹಲ ಹೆಚ್ಚಿಸಿದ್ದು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಡುವಿನ ನಿಲುವುಗಳ ಬಗ್ಗೆ ಕುತೂಹಲ ಮೂಡಿಸಿದೆ. ಮುಂದಿನ ರಾಜಕೀಯ ಚಟುವಟಿಕೆ ಮತ್ತು ಧಾರ್ಮಿಕ ಸಮುದಾಯಗಳ ಪ್ರತಿಕ್ರಿಯೆಯನ್ನು ಕಾದು ನೋಡಬೇಕಿದೆ!

Show More

Related Articles

Leave a Reply

Your email address will not be published. Required fields are marked *

Back to top button