CinemaEntertainment

ಆಸ್ಕರ್‌ನಲ್ಲಿ ಮತ್ತೆ ಮೊಳಗಿತು ‘ಆರ್‌ಆರ್‌ಆರ್’ ಕಹಳೆ.

2023 ನೇ ಸಾಲಿನ ಆಸ್ಕರ್ ಪ್ರಶಸ್ತಿಯಲ್ಲಿ ತನ್ನ ‘ನಾಟು ನಾಟು’ ಹಾಡಿಗೆ ಅತ್ಯುತ್ತಮ ಮೂಲ ಹಾಡು ಎಂಬ ಪ್ರಶಸ್ತಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿದ್ದ ‘ಆರ್‌ಆರ್‌ಆರ್’ ಚಿತ್ರ, ಮತ್ತೆ ಈ ಬಾರಿಯ 2024ರ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸುದ್ದಿಗೆ ಬಂದಿದೆ.

ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕರಾದ ರಾಜಮೌಳಿಯವರ ನಿರ್ದೇಶನದ, ನಟ ರಾಮ್ ಚರಣ್ ಹಾಗೂ ನಟ ಜೂನಿಯರ್ ಎನ್‌ಟಿಆರ್ ಅಭಿನಯದ ‘ಆರ್‌ಆರ್‌ಆರ್’ ಚಿತ್ರ, ಭಾರತದಲ್ಲಿ ಅಷ್ಟೇ ಅಲ್ಲದೆ ಜಗತ್ತಿನಲ್ಲಿಯೂ ಕೂಡ ಅತ್ಯುತ್ತಮ ಪ್ರದರ್ಶನವನ್ನು ಕಂಡಿತ್ತು. ಗೀತಕಾರ ಚಂದ್ರಬೋಸ್ ರಚನೆಯ ‘ನಾಟು ನಾಟು’ ಗೀತೆಗೆ ಕಳೆದ ವರ್ಷ ಆಸ್ಕರ್ ಲಭಿಸಿದ್ದು, ಈ ಚಿತ್ರಕ್ಕೆ ಇನ್ನೂಂದು ಗರಿ ಮೂಡಿಸಿದಂತಾಗಿತ್ತು.

ಈ ಬಾರಿಯ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿಯೂ ಕೂಡ ‘ನಾಟು ನಾಟು’ ಹಾಡಿನ ಜೊತೆಗೆ ಈ ಚಿತ್ರದ ಇನ್ನಿತರ ತುಣುಕುಗಳನ್ನು ಸ್ಕ್ರೀನ್ ನಲ್ಲಿ ಕಾಣಿಸಿದ್ದು, ಅಭಿಮಾನಿಗಳು ‘ಆರ್‌ಆರ್‌ಆರ್’ ಜ್ವರ ಜಗತ್ತಿನಾದ್ಯಂತ ಇನ್ನೂ ಬಿಟ್ಟಿಲ್ಲ ಎಂದು ಹೇಳುತ್ತಿದ್ದಾರೆ.

Show More

Leave a Reply

Your email address will not be published. Required fields are marked *

Related Articles

Back to top button