ಮಂಡ್ಯ ತಲುಪಿದ ಪಾದಯಾತ್ರೆ: ಸ್ವಾಗತ ಮಾಡಲು ಕಾಯುತ್ತಿತ್ತು ಎತ್ತಿನ ಗಾಡಿಗಳು.
ಮಂಡ್ಯ: ಭಾರತೀಯ ಜನತಾ ಪಕ್ಷ ಹಾಗೂ ಜಾತ್ಯತೀತ ಜನತಾದಳದ ಒಗ್ಗೂಡುವಿಕೆಯಲ್ಲಿ ನಡೆಯುತ್ತಿರುವ ಪಾದಯಾತ್ರೆ ಇಂದು ಸಕ್ಕರೆ ನಾಡು ಮಂಡ್ಯ ತಲುಪಿದೆ. ಈ ಪಾದಯಾತ್ರೆಗೆ ರಾಜ್ಯಾದ್ಯಂತ ಅಪಾರ ಪ್ರಮಾಣದ ಬೆಂಬಲ ವ್ಯಕ್ತವಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಿಜೆಪಿಯ ರೈತ ಮೋರ್ಚಾ ಕಾರ್ಯಕರ್ತರು ತಂದಿದ್ದ ಎತ್ತಿನಗಾಡಿಗಳು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರು ಸೇರಿದಂತೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಎತ್ತಿನ ಗಾಡಿಗಳನ್ನು ಏರಿ, ತಾವು ರೈತರ ಹಾಗೂ ಹಿಂದುಳಿದ ವರ್ಗಗಳ ಪರವಾಗಿ ಇದ್ದೇವೆ ಎಂದು ತೋರಿಸಿದರು.
ದಿನದಿಂದ ದಿನಕ್ಕೆ ಕಿಡಿಯಂತೆ ಹೊತ್ತಿಕೊಳ್ಳುತ್ತಿರುವ ಪಾದಯಾತ್ರೆಯ ಕಾವು, ಕಾಂಗ್ರೆಸ್ ಪಕ್ಷಕ್ಕೂ ಕೂಡ ತಾಗಿರುವುದು ನಿಜ. ಪಾದಯಾತ್ರೆಯ ವಿರುದ್ಧವಾಗಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಜನಾಂದೋಲನ ಸಭೆ ಇದಕ್ಕೆ ಸಾಕ್ಷಿಯಾಗಿದೆ. ಮುಡ ಹಗರಣ, ವಾಲ್ಮೀಕಿ ನಿಗಮ ಹಗರಣ, ದಲಿತರಿಗೆ ಮೀಸಲಿಟ್ಟ ನಿಧಿಯನ್ನು ತಮ್ಮ ಗ್ಯಾರಂಟಿ ಗಳಿಗೆ ಬಳಸಿಕೊಂಡ ಆರೋಪ, ಹೀಗೆ ಹತ್ತು ಹಲವು ಭ್ರಷ್ಟಾಚಾರದ ಹಗರಣಗಳು ಕಾಂಗ್ರೆಸ್ ಕುತ್ತಿಗೆಯನ್ನು ಹಿಚುಕುತ್ತಿದೆ.
ಜನಜಾಗೃತಿ ಮೂಡಿಸಲು ನಡೆಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷದ ಈ ಪಾದಯಾತ್ರೆ ಪ್ರಾರಂಭವಾಗಿ ಈಗ ಐದು ದಿನಗಳಾಗಿವೆ. ದಿನದಿಂದ ದಿನಕ್ಕೆ ಈ ಪಾದಯಾತ್ರೆ ತನ್ನ ತೆಕ್ಕೆಯಲ್ಲಿ ಸಾಕಷ್ಟು ಜನರನ್ನು ಕೂಡಿಸಿ ಕೊಳ್ಳುತ್ತಾ ಮೈಸೂರಿನತ್ತ ಸಾಗುತ್ತಿದೆ.