Sports

ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024: ಪ್ರೀತಿಗೆ ಇನ್ನೊಂದು ಕಂಚು, ನಿಶಾದ್‌ಗೆ ಬೆಳ್ಳಿ, ಮುಂದುವರೆದ ಭಾರತದ ಪದಕ ಭೇಟೆ!

ಪ್ಯಾರಿಸ್: ಪ್ಯಾರಾಲಿಂಪಿಕ್ಸ್ 2024 ನಲ್ಲಿ ಭಾರತೀಯ ಪ್ಯಾರಾ ಅಥ್ಲೀಟ್ ಪ್ರೀತಿ ಪಾಲ್ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರೆಸಿಕೊಂಡು ಮಹಿಳೆಯರ 200 ಮೀಟರ್ಸ್ – ಟಿ35 ವಿಭಾಗದ ಫೈನಲ್‌ನಲ್ಲಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. 30.01 ಸೆಕೆಂಡುಗಳ ತಮ್ಮ ವೈಯಕ್ತಿಕ ಅತ್ಯುತ್ತಮ ಸಮಯದೊಂದಿಗೆ ಪ್ರೀತಿ ಪಾಲ್ ಈ ಸಾಧನೆ ಮಾಡಿದ್ದು, ಪ್ಯಾರಾಲಿಂಪಿಕ್ಸ್ ನಲ್ಲಿ ಎರಡು ಪದಕ ಗೆದ್ದ ಮೊದಲ ಭಾರತೀಯ ಟ್ರ್ಯಾಕ್ ಮತ್ತು ಫೀಲ್ಡ್ ಪ್ಯಾರಾ ಅಥ್ಲೀಟ್ ಎಂಬ ಗೌರವವನ್ನು ಕೂಡಾ ಗಳಿಸಿದ್ದಾರೆ.

ನಿಶಾದ್ ಕುಮಾರ್‌ಗೆ ಬೆಳ್ಳಿ ಪದಕ: ಪುರುಷರ ಹೈ ಜಂಪ್ – ಟಿ47 ವಿಭಾಗದಲ್ಲಿ ನಿಶಾದ್ ಕುಮಾರ್ 2.04 ಮೀಟರ್ ಎತ್ತರ ಹಾರಿ ಬೆಳ್ಳಿ ಪದಕ ಗೆದ್ದು, ಭಾರತದ ಪದಕ ಪಟ್ಟಿಯನ್ನು ಹೆಚ್ಚಿಸಿದ್ದಾರೆ.

ಅಭಿಮಾನಿಗಳಲ್ಲಿ ಹೆಚ್ಚಿದ ನಿರೀಕ್ಷೆ: ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024ರಲ್ಲಿ ಭಾರತದ ಪದಕ ಅಭಿಯಾನದಲ್ಲಿ ಇನ್ನೂ ಹಲವು ಪದಕಗಳ ನಿರೀಕ್ಷೆ ಮೂಡಿದೆ. ಐದನೇ ದಿನದ ಸ್ಪರ್ಧೆಗಳಲ್ಲಿ ಭಾರತೀಯ ಕ್ರೀಡಾಪಟುಗಳಿಂದ ಹೆಚ್ಚಿನ ಪದಕಗಳು ಬರುವ ಭರವಸೆ ಮೂಡುತ್ತಿದೆ.

Show More

Leave a Reply

Your email address will not be published. Required fields are marked *

Related Articles

Back to top button