Sports
ಮೊದಲ ಪ್ಲೇ ಆಫ್ ಪಂದ್ಯಕ್ಕೆ ಕ್ಷಣಗಣನೆ.
ಅಹಮದಾಬಾದ್: ಐಪಿಎಲ್ 17ನೇ ಆವೃತ್ತಿಯ ಮೊದಲ ಪ್ಲೇ ಆಫ್ ಪಂದ್ಯ ಇಂದು ಗುಜರಾತಿನ ಅಹಮದಾಬಾದ್ ನಗರದಲ್ಲಿ ಇರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ನಡೆಯಲಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಇರುವ ಮೊದಲ ಹಾಗೂ ಎರಡನೇ ತಂಡಗಳಾದ ಕೆಕೆಆರ್ ಹಾಗೂ ಎಸ್ಆರ್‌ಎಚ್ ಎದುರಾಗಲಿದ್ದಾರೆ.
ಈ ಬಾರಿಯ ಐಪಿಎಲ್ ನಲ್ಲಿ ಕೆಕೆಆರ್ ತಂಡ ಅತ್ಯಂತ ಬಲಿಷ್ಠ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತನ್ನ ಆಲ್‌ರೌಂಡ್ ಪ್ರದರ್ಶನದಿಂದ ಅಂಕಪಟ್ಟಿಯ ಮೊದಲಾರ್ಧದಲ್ಲಿ ತನ್ನ ಸ್ಥಾನವನ್ನು ಮೊದಲಿನಿಂದಲೂ ಗಟ್ಟಿಗೊಳಿಸಿಕೊಂಡು ಬಂದಿದೆ.
ಇತ್ತ ಸನ್ ರೈಸರ್ಸ್ ಹೈದರಾಬಾದ್ ತಂಡ ಸಹ ಈ ಬಾರಿ ಹಲವಾರು ದಾಖಲೆಗಳ ಯಜಮಾನಿಕೆ ಹೊಂದಿದೆ. ಕುಮಿನ್ಸ್ ಅವರ ದಕ್ಷ ನಾಯಕತ್ವ ತಂಡವನ್ನು ಗುಲುವಿನತ್ತ ದಾಪುಗಾಲು ಇಡಲು ಸಹಾಯ ಮಾಡಿದೆ.