BlogGallery

ಕುದೇರು ಪೋಲಿಸ್ ಠಾಣೆ ಈಗ ನಂ.1.

ಚಾಮರಾಜನಗರ: ಪೋಲಿಸರು ಹಾಗೂ ಪೋಲಿಸ್ ಠಾಣೆಯನ್ನು ಜನ ಭಯದಿಂದ ಕಾಣುವುದನ್ನು ನಾವು ಕಂಡಿದ್ದೇವೆ. ಆದರೆ ಇಲ್ಲೊಂದು ಠಾಣೆ ಜನಸ್ನೇಹಿ ಎಂದು ಖ್ಯಾತಿ ಪಡೆದಿದೆ. ಈ ಠಾಣೆ ಈಗ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದಿದೆ.

ಚಾಮರಾಜನಗರ ಜಿಲ್ಲೆಯ ಕುದೇರು ಪೋಲಿಸ್ ಠಾಣೆಯ ಜನಸ್ನೇಹಿ ಕಾರ್ಯಗಳು, ಪೋಲಿಸರ ಕಾರ್ಯವೈಖರಿ, ಅಪರಾಧ ಚಟುವಟಿಕೆ ನಿರ್ವಹಣೆ, ಉತ್ತಮ ಮೂಲಸೌಕರ್ಯಗಳ ಮಾನದಂಡಗಳನ್ನು ಆಧರಿಸಿ ಕೇಂದ್ರ ಗೃಹ ಇಲಾಖೆ ಸಮೀಕ್ಷೆ ನಡೆಸಿ, ಈ ಠಾಣೆಗೆ ದೇಶದಲ್ಲಿಯೇ 5ನೇ ಸ್ಥಾನ ಹಾಗೂ ರಾಜ್ಯದಲ್ಲಿಯೇ ಮೊದಲ ಸ್ಥಾನ ನೀಡಿ ಆಯ್ಕೆ ಮಾಡಿದೆ.

31 ಗ್ರಾಮಗಳನ್ನು ಒಳಗೊಂಡ ಕುದೇರು ಪೋಲಿಸ್ ಠಾಣೆ, ಸಬ್ ಇನ್ಸ್ಪೆಕ್ಟರ್ ಸೇರಿ 31 ಪೋಲಿಸ್ ಸಿಬ್ಬಂದಿಗಳನ್ನು ಹೊಂದಿದೆ. ಈ ಠಾಣೆಗೆ ದೂರಿನೊಂದಿಗೆ ಬಂದ ಯಾರು ಕೂಡ ಅಸಮಾಧಾನದಿಂದ ಹೋಗಿಲ್ಲವಂತೆ. ಇನ್ನೂ ಗಮನಾರ್ಹ ಸಂಗತಿ ಏನೆಂದರೆ ಇಲ್ಲಿನ ಸಿಬ್ಬಂದಿಗಳು ಪ್ರತಿ ಗ್ರಾಮ ಹಾಗೂ ಶಾಲೆಗಳಿಗೆ ತೆರಳಿ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಮೂಡಿಸುತ್ತಿದ್ದಾರೆ.

Show More

Leave a Reply

Your email address will not be published. Required fields are marked *

Related Articles

Back to top button