‘ನಾನು ಬದುಕಿದ್ದೇನೆ’- ಪೂನಂ ಪಾಂಡೆ


ಬಾಲಿವುಡ್ ಹಾಗೂ ಸ್ಯಾಂಡಲ್ ವುಡ್ ಸೇರಿ ಅನೇಕ ಚಲನಚಿತ್ರಗಳಲ್ಲಿ ಅಭಿನಯಿಸಿದ್ದ ಬೋಲ್ಡ್ ನಟಿ ಪೂನಂ ಪಾಂಡೆ ನಿಧನರಾಗಿದ್ದಾರೆ ಎಂಬ ಸುದ್ದಿ ಅವರ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಆಗಿತ್ತು. ಹಲವಾರು ಬಾಲಿವುಡ್ ಸ್ಟಾರ್ ಗಳು, ಸೆಲೆಬ್ರಿಟಿಗಳು ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದರು.
ಆದರೆ ಚಮತ್ಕಾರ ಎಂಬಂತೆ ಇಂದು ನಟಿ ಪೂನಂ ಪಾಂಡೆ ‘ ನಾನು ಬದುಕಿದ್ದೇನೆ ‘ ಎಂಬ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹಾಗಾದರೆ ನಿಜವಾಗಿಯೂ ಆಗಿದ್ದೇನೆ?

ದಿನಾಂಕ 02/02/2024ರಂದು ನಟಿ ಪೂನಂ ಪಾಂಡೆಯ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಅವರು ಗರ್ಭಕಂಠದ ಕ್ಯಾನ್ಸರಿನಿಂದ ನಿಧನರಾದ ಸುದ್ದಿಯನ್ನು ಅಪ್ಲೋಡ್ ಮಾಡಲಾಗಿತ್ತು. ಆದರೆ ಇಂದು ಮತ್ತೆ ಅವರದೇ ಸಾಮಾಜಿಕ ಜಾಲತಾಣಗಳಲ್ಲಿ ‘ನಾನು ಬದುಕಿದ್ದೇನೆ’ ಎಂದು ನಟಿ ಹೇಳಿದ್ದಾರೆ. ಇದು ಅವರ ಸೋಶಿಯಲ್ ಮೀಡಿಯಾ ತಂಡದ ನಿರ್ಲಕ್ಷವೋ? ಅಥವಾ ಇಂತಹ ಗಿಮಿಕ್ ಮಾಡಿ ಜನಪ್ರಿಯತೆ ಪಡೆಯುವ ಹುನ್ನಾರವೋ? ಎಂಬುದು ಜನರ ಅನುಮಾನವಾಗಿದೆ.
ಅಂತೂ ಇನ್ನೂ ಮುಂದೆ ಯಾರಾದರೂ ಮೃತಪಟ್ಟರೆ ತಾ ಮುಂದು ನಾ ಮುಂದು ಎಂಬಂತೆ ‘ರೆಸ್ಟ್ ಇನ್ ಪೀಸ್’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳುವ ಜನರಿಗೆ ಈ ಘಟನೆಯಿಂದ ಎರಡು ಬಾರಿ ಯೋಚಿಸಬೇಕಾದ ಸಂದರ್ಭ ಬಂದಿದೆ.