CinemaEntertainment

“ಪೌಡರ್” ಚಿತ್ರದ ಟ್ರೇಲರ್ ಬಿಡುಗಡೆ: ನಗುವಿನ ಕಚಗುಳಿಗೆ ಹೆಚ್ಚಿದೆ ನಿರೀಕ್ಷೆ

ಬೆಂಗಳೂರು: ಬಹುನಿರೀಕ್ಷಿತ ಹಾಸ್ಯ ಚಿತ್ರ “ಪೌಡರ್” ಈಗ ತನ್ನ ಟ್ರೇಲರ್ ಬಿಡುಗಡೆ ಮೂಲಕ ಸಿನಿಪ್ರಿಯರಲ್ಲಿ ಅತಿದೊಡ್ಡ ನಿರೀಕ್ಷೆಯನ್ನು ಹುಟ್ಟಿಸಿದೆ. ಬೆಂಗಳೂರಿನ ಒರಾಯನ್ ಮಾಲ್ ನ ಪಿ.ವಿ.ಆರ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಚಿತ್ರದ ತಂಡ ಟ್ರೇಲರ್ ಅನ್ನು ಬಿಡುಗಡೆ ಮಾಡಿದ್ದು, ಅದ್ಭುತ ಹಾಸ್ಯ ಟೈಮಿಂಗ್ ಮತ್ತು ವಿಭಿನ್ನ ಕಥಾವಸ್ತುವಿನ ಮೂಲಕ ನಗೆ ಹುಟ್ಟಿಸುವಂತಿದೆ.

ಕಥಾವಸ್ತು:

“ಪೌಡರ್” ಚಿತ್ರದ ಕಥೆ ಇಬ್ಬರು ಯುವಕರು ತಮ್ಮ ಜೀವನದಲ್ಲಿ ಶ್ರೀಮಂತರಗಲು ಮಾಡುವ ಯತ್ನದ ಸುತ್ತ ಇದೆ. ಒಂದು ನಿಗೂಢ “ಪೌಡರ್” ಅವರ ಜೀವನದಲ್ಲಿ ಪವರ್ ನೀಡುತ್ತದೆ. ಈ ಪೌಡರ್‌ನ ಪ್ರಭಾವದಿಂದಾಗಿ ಸಿರಿವಂತರಾಗಲು ಅವರ ಮಾಡಿದ ಪ್ರಯತ್ನಗಳು ಮತ್ತು ಎದುರಾಗುವ ಸಮಸ್ಯೆಗಳ ಚುಟುಕು ಪ್ರದರ್ಶನ ಟ್ರೇಲರ್‌ನಲ್ಲಿ ಲಭ್ಯ. ಈ ಎರಡೂ ಯುವಕರು ತಮ್ಮ ಜೀವನದ ಎಲ್ಲಾ ಸಂಕಷ್ಟಗಳನ್ನು ಎದುರಿಸಿ ಜಯ ಸಾಧಿಸುತ್ತಾರೆಯೇ? ಅವರ ಕನಸುಗಳು ನನಸಾಗುವವೋ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ತಿಂಗಳ 23ರಂದು ಚಿತ್ರಮಂದಿರಗಳಲ್ಲಿ ಸಿಗಲಿದೆ.

ಟ್ರೇಲರ್ ಮತ್ತು ನಿರೀಕ್ಷೆಗಳು:

“ಪೌಡರ್” ಚಿತ್ರವು ಈಗಾಗಲೇ ತನ್ನ ಟೀಸರ್ ಮೂಲಕ ನಗೆ ಚಟಾಕಿ ಹತ್ತಿಸಿದ್ದು, ಹಾಸ್ಯ ದೃಶ್ಯಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದೆ. ಟ್ರೇಲರ್ ಬಿಡುಗಡೆ ನಂತರ, ಚಿತ್ರವನ್ನು ಕುರಿತು ನಿರೀಕ್ಷೆಗಳಲ್ಲಿ ಹೆಚ್ಚಳ ಕಂಡುಬಂದಿದೆ. ಚಿತ್ರಮಂದಿರದಲ್ಲಿ ನಗುವುದಕ್ಕಾಗಿ ಸಿನಿಪ್ರಿಯರು ಉತ್ಸುಕರಾಗಿದ್ದಾರೆ.

ನಟರ ಮತ್ತು ತಂತ್ರಜ್ಞರ ತಂಡ:

  • ನಟರು: ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್, ಶರ್ಮಿಳಾ ಮಾಂಡ್ರೆ, ಅನಿರುದ್ಧ್ ಆಚಾರ್ಯ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ರವಿಶಂಕರ್ ಗೌಡ.
  • ನಿರ್ದೇಶನ: ಜನಾರ್ದನ್ ಚಿಕ್ಕಣ್ಣ
  • ಸಂಗೀತ: ವಾಸುಕಿ ವೈಭವ್
  • ಛಾಯಾಗ್ರಹಣ: ಅದ್ವೈತ ಗುರುಮೂರ್ತಿ
  • ಪ್ರೊಡಕ್ಷನ್ ವಿನ್ಯಾಸ: ವಿಶ್ವಾಸ್ ಕಶ್ಯಪ್

“ಪೌಡರ್” ಚಿತ್ರವು ಕೆ.ಆರ್.ಜಿ. ಸ್ಟೂಡಿಯೋಸ್ ಮತ್ತು ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ ಅವರ ಸಹಯೋಗದಲ್ಲಿ ನಿರ್ಮಿತವಾಗಿದೆ.

  • ನಿರ್ಮಾಪಕರು: ಕಾರ್ತಿಕ್ ಗೌಡ, ಯೋಗಿ ಜಿ ರಾಜ್, ವಿಜಯ್ ಸುಬ್ರಹ್ಮಣ್ಯಂ (ಕೆ.ಆರ್.ಜಿ. ಸ್ಟೂಡಿಯೋಸ್), ಅರುನಭ್ ಕುಮಾರ್ (ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್)
  • ಬ್ಯಾನರ್: ಕೆ.ಆರ್.ಜಿ. ಸ್ಟೂಡಿಯೋಸ್ ಮತ್ತು ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್

ನಗುವಿನ ಡೋಸ್ ನೀಡಲು ಚಿತ್ರಮಂದಿರದಲ್ಲಿ “ಪೌಡರ್” ಚಿತ್ರವು ಈ ತಿಂಗಳ 23ರಂದು ಬಿಡುಗಡೆಯಾಗುತ್ತಿದೆ.

Show More

Leave a Reply

Your email address will not be published. Required fields are marked *

Related Articles

Back to top button