Bengaluru
ಜನವರಿ 28 ಮತ್ತು 29 ರಂದು ಬೆಂಗಳೂರಿನಲ್ಲಿ ವಿದ್ಯುತ್ ವ್ಯತ್ಯಯ: ಎಲ್ಲೆಲ್ಲಿ ಕರೆಂಟ್ ಇರಲ್ಲ ಅಂತಾ ನೋಡಿ!

ಬೆಂಗಳೂರು: ಬೆಂಗಳೂರು ವಿದ್ಯುತ್ ಪೂರೈಕೆ ಕಂಪನಿ (ಬೆಸ್ಕಾಂ) ಪ್ರಕಟಿಸಿದ ಮಾಹಿತಿಯ ಪ್ರಕಾರ, ತುರ್ತು ನಿರ್ವಹಣಾ ಕಾರ್ಯಗಳ ಹಿನ್ನೆಲೆಯಲ್ಲಿ ನಗರದ ಕೆಲವು ಪ್ರದೇಶಗಳಲ್ಲಿ ಜನವರಿ 28 ಮತ್ತು 29 ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಜನವರಿ 28, ಮಂಗಳವಾರ (ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ):
- ಯುಬಿ ಸಿಟಿ
- ಐಟಿಸಿ ಹೋಟೆಲ್
- ಲ್ಯಾವೆಲ್ಲೆ ರಸ್ತೆ
- ವಿಠ್ಠಲ್ ಮಲ್ಯ ರಸ್ತೆ
- ಹೊಂಬೇಗೌಡ ನಗರ
- ಸಂಪಗಿ ನಗರ
- ಜೆಸಿ ರಸ್ತೆ
- ಶಾಂತಿನಗರ
- ಬಿಟಿಎಸ್ ರಸ್ತೆ
- ರಿಚ್ಮಂಡ್ ಸರ್ಕಲ್
- ರೆಸಿಡೆನ್ಸಿ ರಸ್ತೆ
- ಸುಧಾಮನಗರ
- ಕೆಎಚ್ ರಸ್ತೆ
- ವಿಲ್ಸನ್ ಗಾರ್ಡನ್
- ಡಬಲ್ ರಸ್ತೆ
- ಲಾಲ್‌ಬಾಗ್ ರಸ್ತೆ
- ಮತ್ತು ಸುತ್ತಮುತ್ತಲಿನ ಪ್ರದೇಶಗಳು
ಜನವರಿ 29, ಬುಧವಾರ (ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ):
- ಅರೇಹಳ್ಳಿ
- ಇಟ್ಟಮಡು
- ಎಜಿಎಸ್ ಲೇಔಟ್
- ಚಿಕ್ಕಲಸಂದ್ರ
- ಟಿಜಿ ಲೇಔಟ್
- ಭುವನೇಶ್ವರಿ ನಗರ
- ಮತ್ತು ಸುತ್ತಮುತ್ತಲಿನ ಪ್ರದೇಶಗಳು
ಬೆಸ್ಕಾಂ ಸಾರ್ವಜನಿಕರಿಗೆ ಈ ಸಮಯದಲ್ಲಿ ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವಂತೆ ವಿನಂತಿಸಿದೆ. ಹೆಚ್ಚಿನ ಮಾಹಿತಿಗಾಗಿ, ಬೆಸ್ಕಾಂದ ಅಧಿಕೃತ ವೆಬ್‌ಸೈಟ್ ಅಥವಾ ಸ್ಥಳೀಯ ಬೆಸ್ಕಾಂ ಕಚೇರಿಯನ್ನು ಸಂಪರ್ಕಿಸಬಹುದು.