ನವದೆಹಲಿ: ಭಾರತದ ಪ್ರಥಮ ಪ್ರಜೆಯಾದ ದ್ರೌಪದಿ ಮುರ್ಮು ಅವರು, ಭಾರತೀಯ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರ ಜೊತೆಗೆ ಬ್ಯಾಡ್ಮಿಂಟನ್ ಆಡಿದರು. ಈ ರೀತಿಯ ಕ್ರೀಡಾ ಚಟುವಟಿಕೆಗಳಲ್ಲಿ ರಾಷ್ಟ್ರಪತಿಗಳು ತೊಡಗಿಕೊಳ್ಳುವುದು ಅಪರೂಪದ ಸಂಗತಿ ಆಗಿದೆ. ಮುರ್ಮು ಅವರು ತೋರಿದ ಕ್ರೀಡಾ ಒಲವಿನ ಕುರಿತು ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
“ನನ್ನ ಜೀವನದಲ್ಲಿ ಎಂತಹ ಅವಿಸ್ಮರಣೀಯ ದಿನ.. ನನ್ನೊಂದಿಗೆ ಬ್ಯಾಡ್ಮಿಂಟನ್ ಆಡಿದ್ದಕ್ಕಾಗಿ ರಾಷ್ಟ್ರಪತಿಗಳಿಗೆ ತುಂಬಾ ಧನ್ಯವಾದಗಳು.” ಎಂದು ಸೈನಾ ನೆಹ್ವಾಲ್ ಅವರು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ.