ಪ್ರೋ ಕಬಡ್ಡಿ ಲೀಗ್: ಇಂದು ಕಾದಾಡಲಿರುವ ಘಟಾನುಘಟಿ ತಂಡಗಳು ಯಾವುವು..?!
ಬೆಂಗಳೂರು: ಪ್ರೋ ಕಬಡ್ಡಿ ಲೀಗ್ (PKL) 11ನೇ ಆವೃತ್ತಿಯಲ್ಲಿ ಇಂದು (ಅಕ್ಟೋಬರ್ 23) ಎರಡು ರೋಚಕ ಕಾದಾಟಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ತಮಿಳ್ ತಲೈವಾಸ್ ಮತ್ತು ಪುನೇರಿ ಪಲ್ಟನ್ ಮಧ್ಯೆ ಘರ್ಷಣೆ ನಡೆಯಲಿದ್ದು, ನಂತರ ಗುಜರಾತ್ ಜೈಂಟ್ಸ್ ಹಾಗೂ ಯು ಮುಂಬಾ ಅಖಾಡದಲ್ಲಿ ತೀವ್ರ ಸ್ಪರ್ಧೆ ನಡೆಸಲಿವೆ. ಈ ಎರಡೂ ಪಂದ್ಯಗಳು ಹೈದರಾಬಾದ್‌ನ ಗಚಿಬೋಳಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿವೆ. ಪ್ರಥಮ ಪಂದ್ಯ ಸಂಜೆ 8:00 ಗಂಟೆಗೆ ಮತ್ತು ಎರಡನೇ ಪಂದ್ಯ ರಾತ್ರಿ 9:00 ಗಂಟೆಗೆ ನಡೆಯಲಿದೆ.
ಗುಜರಾತ್ ಜೈಂಟ್ಸ್ ವಿರುದ್ಧ ಯು ಮುಂಬಾ:
ಗುಜರಾತ್ ಜೈಂಟ್ಸ್ ಕೊನೆಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ 36-32 ಅಂತರದಲ್ಲಿ ಗೆಲುವು ಸಾಧಿಸಿ, ಈ ಆವೃತ್ತಿಯಲ್ಲಿ ತಮ್ಮ ಮೊದಲ ಜಯವನ್ನು ದಾಖಲಿಸಿದ್ದಾರೆ. ಮತ್ತೊಂದೆಡೆ, ಯು ಮುಂಬಾ ತಂಡವು ದಬಾಂಗ್ ದೆಹಲಿ ವಿರುದ್ಧದ ಮ್ಯಾಚ್‌ನಲ್ಲಿ 28-36 ಅಂತರದಿಂದ ಸೋತಿದೆ.
ಹೆಡ್-ಟು-ಹೆಡ್:
ಈ ಮೊದಲು 14 ಬಾರಿ ಎದುರಿಸಿದಾಗ 9 ಬಾರಿ ಗುಜರಾತ್ ಜಯ ಸಾಧಿಸಿದ್ದು, ಯು ಮುಂಬಾ 4 ಬಾರಿ ಮಾತ್ರ ಗೆದ್ದಿದೆ. ಒಂದು ಪಂದ್ಯ ಡ್ರಾ ಆಗಿದೆ. ಕಳೆದ ಬಾರಿ 44-35 ಅಂತರದಲ್ಲಿ ಗುಜರಾತ್ ಜಯಶಾಲಿಯಾಗಿ ಹೊರಹೊಮ್ಮಿತ್ತು.
ಯು ಮುಂಬಾ ತಂಡದ ಮೇಲೆ ಬಲವಾದ ಒತ್ತಡ:
ಗುಜರಾತ್ 5 ಪಾಯಿಂಟ್‌ಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದು, ಯು ಮುಂಬಾ ಇನ್ನೂ ಯಾವುದೇ ಪಾಯಿಂಟ್‌ಗಳನ್ನು ಗಳಿಸಿಲ್ಲ. ಅವರು ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ.
ತಮಿಳ್ ತಲೈವಾಸ್ ವಿರುದ್ಧ ಪುನೇರಿ ಪಲ್ಟನ್:
ತಮಿಳ್ ತಲೈವಾಸ್ ಅವರು ತೆಲುಗು ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 44-29 ಅಂತರದಲ್ಲಿ ಗೆದ್ದು, ಪ್ರೋ ಕಬಡ್ಡಿ 11ನೇ ಆವೃತ್ತಿಯ ಮೊದಲ ಗೆಲುವು ದಾಖಲಿಸಿದ್ದಾರೆ. ಮತ್ತೊಂದೆಡೆ, ಡಿಫೆಂಡಿಂಗ್ ಚಾಂಪಿಯನ್ ಪುನೇರಿ ಪಲ್ಟನ್ ತಂಡವು ತಮ್ಮ ಇತ್ತೀಚಿನ ಪಂದ್ಯದಲ್ಲಿ ಪಟ್ನಾ ಪೈರೇಟ್ಸ್ ವಿರುದ್ಧ 40-25 ಅಂತರದಲ್ಲಿ ಗೆದ್ದು, ಈ ಅವಧಿಯಲ್ಲಿ ಅಜೇಯತೆಯನ್ನು ಉಳಿಸಿಕೊಂಡಿದೆ.
ಹೆಡ್-ಟು-ಹೆಡ್:
ಈ ತಂಡಗಳು 11 ಬಾರಿ ಮುಖಾಮುಖಿಯಾಗಿದ್ದು, ಪುನೇರಿ ಪಲ್ಟನ್ 6 ಬಾರಿ ಗೆದ್ದು ಮುನ್ನಡೆ ಸಾಧಿಸಿದೆ. ತಮಿಳ್ ತಲೈವಾಸ್ 3 ಬಾರಿ ಗೆದ್ದಿದೆ ಮತ್ತು 2 ಪಂದ್ಯಗಳು ಡ್ರಾ ಆಗಿವೆ. ಈ ಹಿಂದೆ ನಡೆದ ಕಾದಾಟದಲ್ಲಿ ಪುನೇರಿ ಪಲ್ಟನ್ 56-29 ಅಂತರದಲ್ಲಿ ಜಯ ಕಂಡಿತ್ತು.
ಆಟಗಾರರು:
ತಮಿಳ್ ತಲೈವಾಸ್ ಪರ, ಸಚಿನ್ ಮತ್ತು ನರೇಂದ್ರ ಕಾಂಡೋಲಾ ಒಟ್ಟು 10 ರೇಡ್ ಪಾಯಿಂಟ್‌ಗಳನ್ನು ಗಳಿಸಿದ್ದಾರೆ. ತಮಿಳ್ ತಲೈವಾಸ್ ರಕ್ಷಣೆಯನ್ನು ಸಹಿಲ್ ಗುಲಿಯಾ ಮುನ್ನಡೆಸಿದ್ದು, 5 ಟ್ಯಾಕಲ್ ಪಾಯಿಂಟ್‌ಗಳನ್ನು ಪಡೆದಿದ್ದಾರೆ.
ಪುನೇರಿ ಪಲ್ಟನ್ ಪರ ಪ್ರಮುಖ ಅಟ್ಯಾಕಿಂಗ್ ಆಟಗಾರ ಮೋಹಿತ್ ಗೊಯತ್ 9 ರೇಡ್ ಪಾಯಿಂಟ್ ಗಳಿಸಿದ್ದಾರೆ, ಅಲ್ಲದೇ ಡಿಫೆಂಡರ್ ಗೌರವ್ ಖತ್ರಿ 13 ಟ್ಯಾಕಲ್ ಪಾಯಿಂಟ್‌ಗಳನ್ನು ದಾಖಲಿಸಿದ್ದಾರೆ.
ಪಂದ್ಯವೀಕ್ಷಣೆಯನ್ನು ಎಲ್ಲಿ ನೋಡಬಹುದು?
ಈ ಮಹತ್ವದ ಕಬಡ್ಡಿ ಕಾದಾಟಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಲೈವ್‌ನಲ್ಲಿ ವೀಕ್ಷಿಸಬಹುದು.