CinemaEntertainment

ಬೆಂಗಳೂರಿನಲ್ಲಿ ಸೂರ್ಯ ಅಭಿನಯದ ‘ಕಂಗುವ’ ಚಿತ್ರದ ಪ್ರಚಾರ: ನವೆಂಬರ್ 14ರಂದು ಬಿಡುಗಡೆ..!

ಬೆಂಗಳೂರು: ನಟ ಸೂರ್ಯ ನಾಯಕತ್ವದಲ್ಲಿ, ನವೆಂಬರ್ 14ರಂದು ‘ಕಂಗುವ’ ಚಿತ್ರವು ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಈ ಹಿಂದೆ ‘ಬಾಹುಬಲಿ’, ‘ಕೆಜಿಎಫ್’ ಹಾಗೂ ‘ಕಾಂತಾರ’ ಮೂಲಕ ಕಂಡ ಪ್ಯಾನ್-ಇಂಡಿಯಾ ಚಿತ್ರಗಳ ಪ್ರತಿಫಲವನ್ನು ಮುಂದುವರಿಸುತ್ತಾ, ಈ ಸಿನಿಮಾವೂ ಪ್ರೇಕ್ಷಕರನ್ನು ಸೆಳೆಯುವ ಭರವಸೆಯನ್ನು ಹೊಂದಿದೆ. ಸೂರ್ಯ, ಪ್ರಚಾರಕ್ಕಾಗಿ ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದು, ‘ಕಂಗುವ’ ಚಿತ್ರವು ಪ್ರೇಕ್ಷಕರಿಗೆ ನಿಜವಾದ ವಿಸ್ಮಯವನ್ನು ಉಣಬಡಿಸುತ್ತದೆ ಎಂದು ಹೇಳಿದ್ರು.

ಪ್ರೇಕ್ಷಕರನ್ನು 700 ವರ್ಷಗಳ ಹಿಂದಕ್ಕೆ ಕರೆದೊಯ್ಯುವ ‘ಕಂಗುವ’:
ಈ ಚಿತ್ರದಲ್ಲಿ 700 ವರ್ಷಗಳ ಹಿಂದಿನ ಹೈದರಾಬಾದ ರಾಜ್ಯದ ಪಾರ್ಶ್ವಭೂಮಿಯಲ್ಲಿ ನಡೆದ ಕಥೆ ಇದಾಗಿದೆ. ವಿಶೇಷ ಚಿತ್ರೀಕರಣ ತಂತ್ರಗಳು ಹಾಗೂ ಲೈಟ್‌ಗಳಿಲ್ಲದೇ ನೈಸರ್ಗಿಕ ಬೆಳಕಿನಲ್ಲಿ ಚಿತ್ರ ತಯಾರಿಸಿದುದಾಗಿ ಸೂರ್ಯ ವಿವರಿಸಿದರು. ಚಿತ್ರದಲ್ಲಿ ಸೂರ್ಯ ದ್ವಿಪಾತ್ರದಲ್ಲಿ ಅಭಿನಯಿಸುತ್ತಿದ್ದು, ಅವರ ನಯನಮನೋಹರ ಅಭಿನಯವನ್ನು ಕಾಣಲು ಅಭಿಮಾನಿಗಳು ಕಾತರರಾಗಿದ್ದಾರೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ – 3ಡಿ ಹಾಗೂ 4ಡಿ ಸ್ಪರ್ಶ:
ಈ ಬೃಹತ್ ನಿರ್ಮಾಣವನ್ನು ಯುವಿ ಕ್ರಿಯೇಷನ್ಸ್ ಹಾಗೂ ಸ್ಟುಡಿಯೋ ಗ್ರೀನ್ ಲಾಂಛನದಲ್ಲಿ ಸಿದ್ಧಪಡಿಸಲಾಗಿದೆ. ಚಿತ್ರವು 3ಡಿ ಮತ್ತು 4ಡಿ ರೂಪಗಳಲ್ಲಿ ಬಿಡುಗಡೆಯಾಗಲಿದ್ದು, 700 ವರ್ಷಗಳ ಹಿಂದಿನ ಪ್ರಪಂಚವನ್ನು ತೋರಿಸುವ ವಿಶಿಷ್ಟ ಪ್ರಯತ್ನವಾಗಲಿದೆ. ಕನ್ನಡದ ಪ್ರೇಕ್ಷಕರಿಗಾಗಿ ಕೆವಿಎನ್ ಪ್ರೊಡಕ್ಷನ್ಸ್ ಮೂಲಕ ಸುಮಾರು 6000 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

ದ್ವಿಪಾತ್ರದಲ್ಲಿ ಸೂರ್ಯ, ಬಾಬಿ ಡಿಯೋಲ್, ದಿಶಾ ಪಟಾನಿ, ನಟರಾಜನ್ ಸುಬ್ರಮಣ್ಯಂ, ಯೋಗಿ ಬಾಬು, ಕೆ.ಎಸ್. ರವಿಕುಮಾರ್ ಮುಂತಾದ ತಾರೆಗಳು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಚಿತ್ರತಂಡವು ಕಳೆದ ಎರಡೂವರೆ ವರ್ಷಗಳಿಂದ ಈ ಪ್ರಾಜೆಕ್ಟ್‌ನಲ್ಲಿ ಶ್ರಮವಹಿಸಿದೆ.

ನವೆಂಬರ್ 14ರಂದು ಬಿಡುಗಡೆಯಾಗಲಿರುವ ಈ ‘ಕಂಗುವ’ ಆಕ್ಷನ್ ಪ್ರಿಯರಿಗೆ ಹೊಸ ಅನುಭವ ನೀಡಲಿದೆ.

Show More

Related Articles

Leave a Reply

Your email address will not be published. Required fields are marked *

Back to top button