
ಬೆಂಗಳೂರು: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಮೂರು ಆರೋಪಿಗಳಿಗೆ ಬೆಂಗಳೂರಿನ ಎಸಿಎಂಎಂ ನ್ಯಾಯಾಲಯ ಜಾಮೀನು ನೀಡಿದೆ.
ಇಬ್ಬರು ವ್ಯಕ್ತಿಗಳ ಖಚಿತತೆಯನ್ನು ಪಡೆದ ನ್ಯಾಯಾಲಯ, ಆರೋಪಿಗಳಾದ ಮೊಹಮ್ಮದ್ ಶಫಿ ನಾಶಪುಡಿ, ಮೊಹಮ್ಮದ್ ಇಲ್ತಾಝ್, ಮುನಾವರ್ ಅಹ್ಮದ್‌ರಿಗೆ ಜಾಮೀನು ಮಂಜೂರು ಮಾಡಿದೆ.

ಫೆಬ್ರವರಿ 27 ರಂದು, ರಾಜ್ಯಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷದ ನಾಸಿರ್ ಹುಸೇನ್ ಅವರು ಗೆಲುವು ಸಾಧಿಸಿದ್ದರು. ಈ ಗೆಲುವಿನ ವಿಜಯೋತ್ಸವದ ಸಂದರ್ಭದಲ್ಲಿ ಪಾಕ್ ಪರ ಘೋಷಣೆಗಳು ಕೇಳಿಬಂದಿದ್ದವು.