ಬೆಂಗಳೂರು: ಕರ್ನಾಟಕ ರಾಜ್ಯ ಶಿಕ್ಷಣ ಪ್ರಾಧಿಕಾರ ಮಂಡಳಿಯು ಇಂದು ದಿನಾಂಕ 10.04.2024ರಂದು ಪದವಿ ಪೂರ್ವ ಪರೀಕ್ಷೆಯ ಫಲಿತಾಂಶವನ್ನು ತನ್ನ ಅಧಿಕೃತ ವೆಬ್‌ಸೇಟ್‌ನಲ್ಲಿ ಬಿಡುಗಡೆ ಮಾಡಿದೆ.
ಈ ಬಾರಿ 68.36% ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ಉತ್ತೀರ್ಣರಾಗಿದ್ದಾರೆ. 89.96% ವಿದ್ಯಾರ್ಥಿಗಳು ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿದ್ದಾರೆ. 80.94% ವಿದ್ಯಾರ್ಥಿಗಳು ವಾಣಿಜ್ಯ ವಿಭಾಗದಲ್ಲಿ ಉತ್ತೀರ್ಣರಾಗಿದ್ದಾರೆ. ಒಟ್ಟು 5,56,690 ವಿದ್ಯಾರ್ಥಿಗಳು ಈ ವರ್ಷ ತೇರ್ಗಡೆ ಹೊಂದಿದ್ದಾರೆ. 2024ರ ರಾಜ್ಯದ ಒಟ್ಟು ಫಲಿತಾಂಶ 81.15%.
2024ರ ಪಿಯುಸಿ ಫಲಿತಾಂಶದಲ್ಲಿ ಅತ್ಯುತ್ತಮ ಫಲಿತಾಂಶ ಗಳಿಸಿದ ಟಾಪ್ 5 ಜಿಲ್ಲೆಗಳು.
ದಕ್ಷಿಣ ಕನ್ನಡ – 97.37%
ಉಡುಪಿ – 96.80%
ವಿಜಯಪುರ – 94.89%
ಉತ್ತರ ಕನ್ನಡ – 92.51%
ಕೊಡಗು – 92.13%
ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ದಕ್ಷಿಣ ಕನ್ನಡ ಜಿಲ್ಲೆಯು ತನ್ನ ಪ್ರಥಮ ಸ್ಥಾನವನ್ನು ಉಳಿಸಿಕೊಂಡಿದೆ.