ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಇಂದು ಏಪ್ರಿಲ್ 10, 2024 ರಂದು ಕರ್ನಾಟಕ PUC II ಫಲಿತಾಂಶ 2024 ಅನ್ನು ಘೋಷಿಸಿದೆ.ಎಲ್ಲ ವಿಭಾಗಗಳ ಟಾಪರ್‌ಗಳ ಹೆಸರು, ಉತ್ತೀರ್ಣ ಶೇಕಡಾವಾರು, ಜಿಲ್ಲೆಯ ಟಾಪರ್ ಮತ್ತು ಇತರ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ವಿಜ್ಞಾನ ವಿಭಾಗದಲ್ಲಿ ಕರ್ನಾಟಕ ಪಿಯುಸಿ ಪರೀಕ್ಷೆಗೆ ಒಟ್ಟು 277837 ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ 249927 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿಜ್ಞಾನ ಒಟ್ಟಾರೆ ಉತ್ತೀರ್ಣ ಶೇಕಡಾ 89.96% ರಷ್ಟು ಆಗಿದೆ.
1st ವಿದ್ಯಾಲಕ್ಷ್ಮಿ: 598 ಅಂಕಗಳು
2nd : ಕೆ ಎಚ್ ಉರ್ವೀಶ್ ಪ್ರಶಾಂತ್, ವೈಭವಿ ಆಚಾರ್ಯ, ಜಾನ್ಹವಿ ತುಮಕೂರು ಗುರುರಾಜ್ ಮತ್ತು ಗುಣಸಾಗರ್ ಡಿ: 597 ಅಂಕಗಳು
3rd- ಫಾತಿಮಾ ಇಮ್ರಾನ್, ವಿ ಎಸ್ ಶ್ರೀಮನ್ ನಾರಾಯಣ್, ಗೌರಿ ಸಂಜೀವ್ ಸೂರ್ಯವಂಶಿ, ಅಭಿಜಯ್ ಎಂ ಎಸ್ ಮತ್ತು ಹರಿ ಪ್ರಿಯಾ ಆರ್: 596 ಅಂಕಗಳು.
ವಾಣಿಜ್ಯ ವಿಭಾಗದಲ್ಲಿ 215357 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 174315 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇಕಡಾವಾರು 80.94 ರಷ್ಟು ಉತ್ತೀರ್ಣರಾಗಿದ್ದಾರೆ.
ಜ್ಞಾನವಿ ಎಂ ಮಾತ್ರ ವಾಣಿಜ್ಯ ವಿಭಾಗದಲ್ಲಿ 597 ಅಂಕ ಗಳಿಸಿ ಟಾಪರ್ ಆಗಿದ್ದಾರೆ.
ಕಲಾ ವಿಭಾಗಕ್ಕಾಗಿ, 187891 ವಿದ್ಯಾರ್ಥಿಗಳು ಹಾಜರಾಗಿದ್ದು ಅದರಲ್ಲಿ 128448 ವಿದ್ಯಾರ್ಥಿಗಳು ಕರ್ನಾಟಕ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶೇಕಡಾವಾರು 68.36 % ರಷ್ಟು ಉತ್ತೀರ್ಣರಾಗಿದ್ದಾರೆ.ಬೆಂಗಳೂರಿನ ಎನ್‌ಎಂಕೆಆರ್‌ವಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಮೇದಾ ಡಿ 596 ಅಂಕಗಳನ್ನು, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜಯಪುರ ಎಸ್‌ಎಸ್‌ಪಿ ಕಾಲೇಜಿನ ವೇದಾಂತ್ ಮತ್ತು ಬಳ್ಳಾರಿಯ ಐಎನ್‌ಡಿಯು ಐಎನ್‌ಡಿಪಿ ಪಿಯು ಕಾಲೇಜಿನ ಕವಿತಾ ಬಿವಿ ಕೂಡ 596 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.