ಪುಣೆಯಲ್ಲಿ ನಡೆದ ಭೀಕರ ಅಪಘಾತಕ್ಕೆ ಸಿಕ್ಕಿದೆ ‘ಬಿಗ್ ಟ್ವಿಸ್ಟ್’.
ಪುಣೆ: ಕಳೆದ ಭಾನುವಾರ ಮಹಾರಾಷ್ಟ್ರದ ಪುಣೆ ನಗರದ ಕಲ್ಯಾಣಿ ನಗರ ಜಂಕ್ಷನ್‌ನಲ್ಲಿ ನಡೆದ ಭೀಕರ ಕಾರು ಅಪಘಾತ, ಬೈಕಿನಲ್ಲಿ ಸಾಗುತ್ತಿದ್ದ ಇಬ್ಬರನ್ನು ಬಲಿ ಪಡೆದಿದೆ. ಪೋರ್ಷೆ ಕಾರನ್ನು ಹಿಡಿತವಿರದೆ ಚಲಾಯಿಸಿ ಇಬ್ಬರು ವ್ಯಕ್ತಿಗಳ ಸಾವಿಗೆ ಕಾರಣರಾದ ಆರೋಪಿ, 17 ವರ್ಷದ ವೇದಾಂತ ಅಗರ್ವಾಲ್, ಪುಣೆಯ ಹೆಸರಾಂತ ಬಿಲ್ಡರ್ ವಿಶಾಲ್ ಅಗರ್ವಾಲ್ ಅವರ ಮಗ ಎಂದು ತಿಳಿದುಬಂದಿದೆ.
ಹಾಗಾಗಿ ಧನ ಬಲದಿಂದ ಈ ಪ್ರಕರಣವನ್ನು ಮುಚ್ಚಿ ಹಾಕಲು ಎಲ್ಲಾ ರೀತಿಯ ಪ್ರಯತ್ನ ನಡೆಯುತ್ತಿದೆಯೆಂಬ ಆರೋಪವೂ ಕೂಡ ಕೇಳಿ ಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ವೇದಾಂತ್ ಅಗರ್ವಾಲ್ ಅವರ ‘ಆಲ್ಕೋಹಾಲ್ ಪರಿಕ್ಷೆ’ ನೆಗೆಟಿವ್ ಎಂದು ಬಂದಿದೆ. ಆದರೆ ಆರೋಪಿ ಆಲ್ಕೋಹಾಲ್ ಸೇವಿಸಿದ ಬಗ್ಗೆ ಸಿಸಿಟಿವಿ ಚಿತ್ರಾವಳಿಗಳು ಬಹಿರಂಗ ಪಡಿಸಿದೆ. ಹಾಗಾಗಿ ಸತ್ಯಕ್ಕೆ ಜಯ ದೊರೆಯಲು, ಮೃತರಿಗೆ ನ್ಯಾಯ ಸಿಗಲು ಇನ್ನು ಎಷ್ಟು ವರ್ಷ ಕಾಯಬೇಕಿದೆಯೋ.
ಭಾರತದಲ್ಲಿ ‘ಹಿಟ್ ಎಂಡ್ ರನ್’ ಪ್ರಕರಣಗಳು ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಇವುಗಳನ್ನು ನಿಯಂತ್ರಿಸಬೇಕು ಎಂದರೆ ಸರಿಯಾದ ಕಾಯ್ದೆಯನ್ನು ಸರ್ಕಾರ ಜಾರಿಗೆ ತರಬೇಕು.