Bengaluru
ಮಳೆ ಮುನ್ಸೂಚನೆ; ಏನಾಗಲಿದೆ ಮುಂದಿನ 24 ಗಂಟೆಗಳಲ್ಲಿ?
ಉತ್ತರ ಕನ್ನಡ: ಈ ಬಾರಿ ರಾಜ್ಯದ ಕರಾವಳಿ ಭಾಗವು ಅತ್ಯಂತ ಬಾರಿ ಪ್ರಮಾಣದ ಮಳೆಯನ್ನು ಹೊಂದುತ್ತಿದೆ. ಒಂದು ಕಡೆ ರಾಜ್ಯದಲ್ಲಿ ಜಲಾಶಯಗಳು ಭರ್ತಿಯಾಗಿವೆ ಎಂಬ ಸಂತೋಷದ ಸಂಗತಿ ಒಂದಡೆಯಾದರೆ, ಕರಾವಳಿ ಭಾಗದಲ್ಲಿ ಹಾದುಹೋಗುವ ಪಶ್ಚಿಮ ಘಟ್ಟಗಳ ಗುಡ್ಡಗಳು ಕುಸಿಯುತ್ತಿರುವ ನೋವಿನ ಸಂಗತಿ ಇನ್ನೊಂದಡೆಯಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ರಾಜ್ಯದ ಮಳೆ ಮುನ್ಸೂಚನೆಯನ್ನು ನೀಡಿದೆ. “ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣದಿಂದ ಅತಿ ಭಾರಿ ಮಳೆ. ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಚದುರಿದಂತೆ ಭಾರಿ ಮತ್ತು ಅತಿ ಭಾರಿ ಮಳೆ. ಉತ್ತರ ಒಳನಾಡು & ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.” ಎಂದು ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಿಲ್ಕುಂದ ಗ್ರಾಮ ಅತ್ಯಂತ ಹೆಚ್ಚು ಮಳೆ ಪಡೆದಿದೆ. ಬರೋಬ್ಬರಿ 198.5 ಮಿಮೀ ಮಳೆ ಇಲ್ಲಿ ಸುರಿದಿದೆ.