ದೀಪಾವಳಿಗೆ ವರುಣನಿಂದ ವಿಘ್ನ: ರಾಜ್ಯದಲ್ಲಿ ಸುರಿಯಲಿದೆಯೇ ಭಾರೀ ಮಳೆ..?!
ಬೆಂಗಳೂರು: ಕರ್ನಾಟಕ ರಾಜ್ಯ ಪ್ರಾಕೃತಿಕ ವಿಪತ್ತು ನಿರ್ವಹಣಾ ಕೇಂದ್ರದ (KSNDMC) ಮಾಹಿತಿಯ ಪ್ರಕಾರ, ದೀಪಾವಳಿ ಸಂಜೆಗೆ ಬೆಂಗಳೂರಿನಲ್ಲಿ ಲಘು ಅಥವಾ ಮಧ್ಯಮ ಮಳೆಯ ಸಾಧ್ಯತೆ ಇದೆ. ದಕ್ಷಿಣ ಹಾಗೂ ಪೂರ್ವ ಭಾಗದಲ್ಲಿ ರಾತ್ರಿ ಗುಡುಗು ಸಹಿತ ಭಾರೀ ಮಳೆ ಸುರಿಯಬಹುದು ಎಂದು ಮುನ್ಸೂಚನೆ ನೀಡಲಾಗಿದೆ. ಮಳೆಯ ಪ್ರಮಾಣ ದೀಪಾವಳಿ ರಾತ್ರಿ ಹೆಚ್ಚಾಗುವ ಸಾಧ್ಯತೆಯೂ ಇದೆ.
ಕೆಎಸ್‌ಎನ್‌ಡಿಎಮ್‌ಸಿ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದಂತೆ, “ಬಿಬಿಎಂಪಿ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಲಘು ಮತ್ತು ಮಧ್ಯಮ ಮಳೆ, ಮತ್ತು ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಬಹುದು.” ಇದರ ಜೊತೆಗೆ, ಬೆಂಗಳೂರು ನಗರದ ತಾಪಮಾನ ಇಂದು 25.31 ಡಿಗ್ರಿ ಸೆಲ್ಸಿಯಸ್‌ನಲ್ಲಿದ್ದು, ಕನಿಷ್ಠ ತಾಪಮಾನ 20.44 ಡಿಗ್ರಿ ಮತ್ತು ಗರಿಷ್ಠ ತಾಪಮಾನ 26.88 ಡಿಗ್ರಿ ಎಂದು ತಿಳಿಸಿದೆ. ಸಾಪೇಕ್ಷ ಆರ್ದ್ರತೆ 69% ಇದ್ದು, ಗಾಳಿಯ ವೇಗ 69 ಕಿಮೀ/ಗಂಟೆ ಇದೆ.
ಮಳೆಯ ಎಚ್ಚರಿಕೆಯು ಬೆಂಗಳೂರಿನಲ್ಲಷ್ಟೇ ಅಲ್ಲ, ತುಮಕೂರು, ಕೊಲಾರ, ಚಿಕ್ಕಬಳ್ಳಾಪುರ, ಹಾಸನ, ಮಂಡ್ಯ, ಚಿಕ್ಕಮಗಳೂರು, ಚಿತ್ರದುರ್ಗ, ಉತ್ತರ ಕನ್ನಡ, ಧಾರವಾಡ, ಬೀದರ್, ಮೈಸೂರು, ದಾವಣಗೆರೆ, ಬೆಳಗಾವಿ, ಕಲಬುರ್ಗಿ, ರಾಮನಗರ, ಮಂಡ್ಯ, ಹಾವೇರಿ, ಗದಗ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಭಾಗಗಳಲ್ಲೂ ಹಬ್ಬಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.