Politics
ರಾಮ ಮೋಹನ ನಾಯ್ಡು ಮೋದಿ 3.0 ಸರ್ಕಾರದ ಅತ್ಯಂತ ಕಿರಿಯ ಸಚಿವ.
ನವದೆಹಲಿ: ಚಂದ್ರಬಾಬು ನಾಯ್ಡು ನಾಯಕತ್ವದ ತೆಲುಗು ದೇಶಂ ಪಕ್ಷದ ನೂತನ ಸಂಸದರಾಗಿ ಆಯ್ಕೆಗೊಂಡಿರುವ ಶ್ರೀ ರಾಮ ಮೋಹನ್ ನಾಯ್ಡು ಅವರು ನಿನ್ನೆ ಪ್ರಮಾಣವಚನ ಸ್ವೀಕರಿಸಿದರು. ಇವರು ಮೋದಿಯವರ ಮೂರನೇ ಬಾರಿಯ ಸಚಿವ ಸಂಪುಟದಲ್ಲಿ ಅತ್ಯಂತ ಕಿರಿಯ ಸಚಿವರು ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಕಿಂಜರುಪು ರಾಮಮೋಹನ ನಾಯ್ಡು, ಆಂಧ್ರ ಪ್ರದೇಶದ ಶ್ರೀಕಾಕುಲಂ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಸರಿ ಸುಮಾರು 3.27 ಲಕ್ಷ ಮತಗಳ ಅಂತರದಿಂದ ಗೆದ್ದು ಸಂಸತ್ತನ್ನು ಪ್ರವೇಶಿಸಿದ್ದಾರೆ. ಇವರು ಪ್ರಸ್ತುತ ತೆಲುಗು ದೇಶಂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ.
ನಿನ್ನೆ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಇವರು ಕೂಡ ರಾಷ್ಟ್ರಪತಿಗಳಿಂದ ಪ್ರಮಾಣವಚನವನ್ನು ಸ್ವೀಕರಿಸಿದ್ದಾರೆ. ಈಗಾಗಲೇ ಚಂದ್ರಬಾಬು ನಾಯ್ಡು ಅವರು ರಾಜ್ಯ ಖಾತೆ ಸಚಿವಾಲಯಗಳ ಬೇಡಿಕೆಯನ್ನು ಬಿಜೆಪಿಯ ಮುಂದೆ ಇಟ್ಟಿದ್ದಾರೆ. ತೆಲುಗು ದೇಶಂ ಪಕ್ಷಕ್ಕೆ ಎಷ್ಟು ಗಾದೆಗಳು ಸಿಗಲಿದೆ ಎಂಬುದು ಮುಂದೆ ತಿಳಿಯಲಿದೆ.