BengaluruIndia

ರಂಜಾನ್ ಹಬ್ಬ ಆಚರಣೆ ಹಿಂದಿನ ಉದ್ದೇಶವೇನು?

ಬೆಂಗಳೂರು: ಇಂದು ಇಡೀ ಮುಸ್ಲಿಂ ಜಗತ್ತು ರಂಜಾನ್ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸುತ್ತಿದೆ. ರಂಜಾನ್ ಮುಸಲ್ಮಾನರಿಗೆ ಒಂದು ಪವಿತ್ರ ತಿಂಗಳಾಗಿದೆ. ರಂಜಾನ್ ಹಬ್ಬದ ಪರವಾಗಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ. ಸಿದ್ದರಾಮಯ್ಯನವರು ತಮ್ಮ ಎಕ್ಸ್ ಖಾತೆಯಲ್ಲಿ ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ.

ಇಸ್ಲಾಂ ಕ್ಯಾಲೆಂಡರಿನ ಒಂಬತ್ತನೇ ತಿಂಗಳೇ ರಂಜಾನ್ ತಿಂಗಳು. ಇದನ್ನು ಮುಸ್ಲಿಂರು ಜಗತ್ತಿನಾದ್ಯಂತ ಆಚರಿಸುತ್ತಾರೆ. ಇಸ್ಲಾಂ ನಂಬಿಕೆಯ ಪ್ರಕಾರ ಕ್ರಿ.ಶ. 610 ರಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಅವರಿಗೆ, ಇಸ್ಲಾಂ ಧರ್ಮದ ಪವಿತ್ರ ಗ್ರಂಥ ಕುರಾನ್ ಷರೀಫ್‌ನ ಜ್ಞಾನೋದಯವಾಯಿತು ಎಂದು ಹೇಳಲಾಗಿದೆ. ಈ ಜ್ಞಾನೋದಯ ರಂಜಾನ್ ತಿಂಗಳಲ್ಲಿ ಆಗಿದ್ದರಿಂದ ಈ ತಿಂಗಳನ್ನು ಪವಿತ್ರ ತಿಂಗಳು ಎಂಬುವುದು ಮುಸಲ್ಮಾನರ ನಂಬಿಕೆ.

ಈ ಪವಿತ್ರ ಮಾಸದಲ್ಲಿ ಮುಸ್ಲಿಂರು ಉಪವಾಸ ಕೈಗೊಳ್ಳುತ್ತಾರೆ. ಈ ರಂಜಾನ್ ಹಬ್ಬದಂದು ತಮ್ಮ ಉಪವಾಸವನ್ನು ಮುರಿಯುತ್ತಾರೆ.

Show More

Related Articles

Leave a Reply

Your email address will not be published. Required fields are marked *

Back to top button