CinemaEntertainment

“ರಾನಿ” ಟ್ರೈಲರ್ ಬಿಡುಗಡೆಗೆ ಸಿದ್ಧವಾದ ಚಿತ್ರತಂಡ: ಸೆಪ್ಟೆಂಬರ್ 12ಕ್ಕೆ ಚಿತ್ರಮಂದಿರಗಳಿಗೆ ಗ್ರಾಂಡ್ ಎಂಟ್ರಿ..!

ಬೆಂಗಳೂರು: ಸೆಪ್ಟೆಂಬರ್ 12, ಗುರುವಾರ ಬಿಡುಗಡೆಯಾಗುತ್ತಿರುವ ಕಿರಣ್ ರಾಜ್ ಅಭಿನಯದ, ಗುರುತೇಜ್ ಶೆಟ್ಟಿ ನಿರ್ದೇಶನದ ಬಹುನಿರೀಕ್ಷಿತ “ರಾನಿ” ಚಿತ್ರದ ಟ್ರೈಲರ್, ಸೆಪ್ಟೆಂಬರ್ 2 ಸೋಮವಾರ ಸಂಜೆ 5:10ಕ್ಕೆ ಟಿ-ಸೀರೀಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ. ಸ್ಟಾರ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಚಂದ್ರಕಾಂತ ಪೂಜಾರಿ ಮತ್ತು ಉಮೇಶ್ ಹೆಗ್ಡೆ ನಿರ್ಮಿಸಿರುವ ಮೊದಲ ಚಿತ್ರ ಇದಾಗಿದ್ದು, ಪೋಸ್ಟರ್, ಟೀಸರ್ ಹಾಗೂ ಮೇಕಿಂಗ್‌ ವಿಡಿಯೊಗಳಿಂದಲೇ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ.

“ರಾನಿ” ಸಿನಿಮಾ ಗ್ಯಾಂಗ್ಸ್ಟರ್ ಕಥೆಯನ್ನು ಫ್ಯಾಮಿಲಿ ಎಮೋಷನ್ಸ್ ಜೊತೆ ಬೆರಕೆ ಮಾಡಿ, ಪ್ರೇಕ್ಷಕರಿಗೆ ಒಂದು ವಿಭಿನ್ನ ಅನುಭವ ನೀಡಲು ಸಜ್ಜಾಗಿದೆ. ಚಿತ್ರದಲ್ಲಿ ಯಾವುದೇ ರೀತಿಯ ಅಸಭ್ಯತೆ ಇಲ್ಲದೇ, ಕುಟುಂಬ ಸಮೇತ ನೋಡುವಂತಾಗಿ ಮಾಡಲಾಗಿದೆ. ಸೆನ್ಸಾರ್ ಮಂಡಳಿ ಚಿತ್ರದ ಪರಿಣಾಮಕಾರಿ ಕಥೆ ಕಂಡು ಯಾವುದೇ ಕಟ್ಸ್ ಕೊಡದೆ, U/A ಸರ್ಟಿಫಿಕೇಟ್ ನೀಡಿದೆ. ನಿರ್ದೇಶಕ ಗುರುತೇಜ್ ಶೆಟ್ಟಿ, “ಇದು ಬಿಗ್ ಬಡ್ಜೆಟ್ ಮತ್ತು ಬಿಗ್ ಮೇಕಿಂಗ್ ಸಿನಿಮಾವಾಗಿದ್ದು, ಪ್ರೇಕ್ಷಕರಿಗೆ ಮನರಂಜನೆ ಮತ್ತು ಅಭಿಮಾನಿಗಳ ನಿರೀಕ್ಷೆಗಳನ್ನು ಪೂರೈಸಲು ಸಿದ್ಧವಾಗಿದೆ” ಎಂದು ಹೇಳಿದ್ದಾರೆ.

ಈ ಸಿನಿಮಾದಲ್ಲಿ ಕಿರಣ್ ರಾಜ್ ಅವರ ಸೊಗಸಾದ ನಟನೆಯ ಜೊತೆಗೆ, ಹೊಸ ಕಥಾನಕ, ಪ್ರಬಲ ಬಜೆಟ್ ಹಾಗೂ ಬೃಹತ್ ತಂತ್ರಜ್ಞಾನ ಬಳಕೆಯಿಂದ “ರಾನಿ” ಚಿತ್ರದ ಮೇಲೆ ಅಪಾರ ನಿರೀಕ್ಷೆ ಇದೆ. ಪ್ರೇಕ್ಷಕರು ಸೆಪ್ಟೆಂಬರ್ 2 ರಂದು ಟ್ರೈಲರ್ ನೋಟದೊಂದಿಗೆ ಸಿನಿಮಾದ ಪ್ರಥಮ ದೃಶ್ಯವನ್ನು ಅನುಭವಿಸಬಹುದಾಗಿದೆ.

Show More

Related Articles

Leave a Reply

Your email address will not be published. Required fields are marked *

Back to top button