ಆರ್‌ಸಿಬಿಯನ್ನು ಎದುರಿಸಲಿದೆ ಕೆಕೆಆರ್ ತಂಡ. ಯಾರು ಗೆಲ್ಲಲಿದ್ದಾರೆ ಇಂದಿನ ಪಂದ್ಯ?
ಬೆಂಗಳೂರು: ಇಂದು ಮತ್ತೆ ಕಣಕ್ಕಿಳಿಯಲಿದ್ದಾರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಹಣಾಹಣಿಗೆ ವೇದಿಕೆ ಸಿದ್ಧವಾಗಿದೆ. ಕ್ರಿಕೆಟ್ ಅಭಿಮಾನಿಗಳಿಗೆ ಇಂದು ರಸದೌತಣ ತಪ್ಪಲು ಸಾಧ್ಯವೇ ಇಲ್ಲ.
ಈ ಬಾರಿಯ ಐಪಿಎಲ್‌ನ ಪ್ರಾರಂಭದಲ್ಲಿ ಮುಗ್ಗರಿಸಿದರೂ ಕೂಡ ತನ್ನ ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ಗಳನ್ನು ಸೋಲಿಸಿ, ‘ಇದು ಆರ್‌ಸಿಬಿಯ ಹೊಸ ಅಧ್ಯಾಯ’ ಎಂದು ಅಬ್ಬರಿಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮೂರನೇ ಪಂದ್ಯಕ್ಕೆ ಅತ್ಯುತ್ತಮ ತಯಾರಿ ನಡೆಸಿದೆ.
ಇತ್ತ ಶ್ರೇಯಸ್ ಅಯ್ಯರ್ ಅವರ ನಾಯಕತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡ, ತನ್ನ ಮೊದಲ ಪಂದ್ಯದಲ್ಲಿ ಎಸ್‌ಆರ್‌ಎಚ್ ತಂಡದ ವಿರುದ್ಧದ 4 ರನ್‌ಗಳ ಗೆಲುವಿನಿಂದ ತನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಇಂದು ಆರ್‌ಸಿಬಿಯನ್ನು ಮಣಿಸಲು ಸಿದ್ಧವಾಗಿದೆ.
ಎರಡು ಘಟಾನುಘಟಿ ತಂಡಗಳು ಇಂದು ಎದುರಾಗುತ್ತಿರುವುದು ಪ್ರೇಕ್ಷಕರಲ್ಲಿ ರೋಮಾಂಚನ ಹುಟ್ಟಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ತವರು ನೆಲದ ಅನುಕೂಲವನ್ನು ಪಡೆದು ಇಂದು ಮತ್ತೊಂದು ಗೆಲುವು ಸಾಧಿಸಲಿದೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ಇಂದು ರಾತ್ರಿ ಸಿಗಲಿದೆ.